alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಡಿಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ವಿಡಿಯೋ ವೈರಲ್

ಕೋಲ್ಕತ್ತಾ ಮೆಟ್ರೋ ನಿಲ್ದಾಣದಲ್ಲಿ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಚರ್ಚೆಯಲ್ಲಿರುವಾಗಲೇ ರಾಜಸ್ತಾನದಲ್ಲಿ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಅಜಮೇರ್ ನಲ್ಲಿ ಯುವ ಜೋಡಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಏಪ್ರಿಲ್ 24 ರಂದು ನಡೆದಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ. ಯುವಕ-ಯುವತಿ ಇಬ್ಬರೂ ಬೇರೆ ಜಾತಿಯವರಾಗಿದ್ದು, ಮದುವೆಯಾಗಲು ಬಯಸಿದ್ದರಂತೆ.

ಪ್ರೇಮಿಗಳ ಪ್ರೇಮ ಸಂಬಂಧ ಬಹಿರಂಗವಾಗ್ತಿದ್ದಂತೆ ಒಂದು ಸಮುದಾಯದ ಜನರು ಯುವಕನ ಬಟ್ಟೆ ಬಿಚ್ಚಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಹುಡುಗಿಗೆ 10-15 ಮಂದಿ ಚಪ್ಪಲಿ ಏಟು ನೀಡಿದ್ದಾರೆ. ವಿಡಿಯೋದಲ್ಲಿ ಯುವಕ-ಯುವತಿ ಕ್ಷಮೆ ಯಾಚಿಸುತ್ತಿದ್ದಾರೆ. ಜನರು ಮಾತ್ರ ಕರುಣೆ ತೋರಿಸಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...