alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಮಾಡಿ ಸಾವಿಗೆ ಶರಣಾದ ಯುವ ದಂಪತಿಗಳು

Crime-Pix 11aತಿರುಮಲಕ್ಕೆ ಬಂದಿದ್ದ ಯುವ ದಂಪತಿಗಳು ಟಿಟಿಡಿಯ ಗೆಸ್ಟ್ ಹೌಸ್ ನಲ್ಲಿ ರೂಂ ಪಡೆದುಕೊಂಡಿದ್ದು, ಅಲ್ಲಿಯೇ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಂಪತಿಗಳು ಸೆಲ್ಫಿ ತೆಗೆದುಕೊಂಡಿರುವುದಲ್ಲದೇ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಸಂದೇಶ ಮಾಡಿಟ್ಟಿರುವುದು ಬೆಳಕಿಗೆ ಬಂದಿದೆ.

ದಂಪತಿಗಳನ್ನು ತಮಿಳುನಾಡಿನ ಕೊಯಮತ್ತೂರು ನಿವಾಸಿಗಳಾದ ಸಂಪತ್ ಕುಮಾರ್ ಹಾಗೂ ಸತ್ಯವಾಣಿ ಎಂದು ಗುರುತಿಸಲಾಗಿದ್ದು, ಮೂರು ದಿನಗಳ ಹಿಂದೆ ತಿರುಮಲಕ್ಕೆ ಬಂದಿದ್ದ ಇವರುಗಳು ರಾಮ್ ಬಗೀಚಾ ಗೆಸ್ಟ್ ಹೌಸ್ ನಲ್ಲಿ ರೂಂ ಮಾಡಿಕೊಂಡಿದ್ದರು.

ಮಂಗಳವಾರದಂದು ಗೆಸ್ಟ್ ಹೌಸ್ ಸಿಬ್ಬಂದಿ ರೂಂ ಸ್ವಚ್ಚ ಮಾಡಲು ಕದ ತಟ್ಟಿದ ವೇಳೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆನ್ನಲಾಗಿದೆ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ರೂಂ ಬಾಗಿಲು ಒಡೆದು ನೋಡಿದ ವೇಳೆ ಕೊಕ್ಕೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ. ಇಬ್ಬರ ಭಾರವನ್ನು ಫ್ಯಾನ್ ತಾಳಲಾರದೆಂಬ ಕಾರಣಕ್ಕೆ ಫ್ಯಾನ್ ಬಿಚ್ಚಿಟ್ಟು ಕೊಕ್ಕೆಗೆ ಇವರುಗಳು ನೇಣು ಬಿಗಿದುಕೊಂಡಿದ್ದಾರೆ. ಕೋಣೆಯಲ್ಲಿ ಮೊಬೈಲ್ ದೊರೆತಿದ್ದು, ಸಾವಿಗೂ ಮುನ್ನ ಸೆಲ್ಫಿ ತೆಗೆದುಕೊಂಡಿರುವುದಲ್ಲದೇ ವಿಡಿಯೋ ಸಂದೇಶವೊಂದನ್ನು ಮಾಡಿಟ್ಟಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...