alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಂತವರಲ್ಲ ಸ್ವಾಮಿ ಈ ಮಹಿಳೆ, ಈಕೆ ಪತಿ

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇಂಜಿನಿಯರ್ ಹಾಗೂ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ ಆಸೆ ತೋರಿಸಿ ನಿರುದ್ಯೋಗಿಗಳಿಂದ ಹಣ ದೋಚಿದ್ದಾರೆ ಈ ದಂಪತಿ. ಸರಿ ಸುಮಾರು 30 ಲಕ್ಷ ರೂಪಾಯಿ ಮೋಸ ಮಾಡಿರುವ ದಂಪತಿ ಬಣ್ಣ ಈಗ ಬಯಲಾಗಿದೆ.

ಗುಲ್ಮೋಹರ್ನಲ್ಲಿ ನಕಲಿ ಕಚೇರಿ ನಡೆಸುತ್ತಿದ್ದ ದಂಪತಿ ಆಫರ್ ಲೆಟರ್ ಕೂಡ ನೀಡಿದ್ದಾರೆ. ಸರಿಯಾದ ಸಮಯಕ್ಕೆ ಕೆಲಸ ಸಿಗದ ಕಾರಣ ವ್ಯಕ್ತಿಯೊಬ್ಬ ದಂಪತಿ ಕಚೇರಿಗೆ ಬಂದಿದ್ದಾನೆ. ಆದ್ರೆ ದಂಪತಿ ಅಲ್ಲಿರಲಿಲ್ಲ. ಕೆಲ ದಿನಗಳ ನಂತ್ರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕಚೇರಿ ಸ್ಥಳಕ್ಕೆ ಬಂದಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ನಾಪತ್ತೆಯಾಗಿದ್ದಾನೆ.

ಆರೋಪಿ ಸೋನಾಲಿ ಹಾಗೂ ಆಕೆ ಪತಿ ಯೋಗೇಶ್ 2018ರಲ್ಲಿ ಕಂಪನಿ ಶುರು ಮಾಡಿದ್ದರು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಜಾಹೀರಾತು ಕೂಡ ನೀಡಿದ್ದರು. ಸೋನಾಲಿ ನಿರುದ್ಯೋಗಿಗಳ ಸಂದರ್ಶನ ತೆಗೆದುಕೊಳ್ಳುತ್ತಿದ್ದಳು. ನಂತ್ರ ಯೋಗೇಶ್ ಭದ್ರತೆ ನೆಪ ಹೇಳಿ ಹಣ ಪಡೆಯುತ್ತಿದ್ದ. ನಂತ್ರ ನಕಲಿ ಉದ್ಯೋಗ ಪತ್ರ ನೀಡಿ, ಶೀಘ್ರವೇ ಕರೆ ಬರುತ್ತೆ ಎಂದು ನಂಬಿಸುತ್ತಿದ್ದ. ಈವರೆಗೆ ಮೂವರು ಯುವಕರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಎಲ್ಲರೂ ತಲಾ 15 ಸಾವಿರ ರೂಪಾಯಿ ನೀಡಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...