alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯನ್ನು ಉಲ್ಟಾ ಕಟ್ಟಿ ಹೊಡೆದು ಸಾಯಿಸಿದ್ರು…!

ಮುಂಬೈನ ಥಾಣೆಯಲ್ಲಿ ವ್ಯಕ್ತಿಯೊಬ್ಬನನ್ನು ತಲೆ ಕೆಳಗೆ ನೇತು ಹಾಕಿ ಮನಸ್ಸಿಗೆ ಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ. ಲಾಠಿ ಹಾಗೂ ಬಲವಾದ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ವ್ಯಕ್ತಿ ಸಾಯುವವರೆಗೂ ಆತನಿಗೆ ಹೊಡೆಯಲಾಗಿದೆ. ದುರಾದೃಷ್ಟವೆಂದ್ರೆ ವ್ಯಕ್ತಿ ಸಾಯುತ್ತಿದ್ದರೂ ಬದಿಯಲ್ಲಿ ನಿಂತು ಮೂಖ ಪ್ರೇಕ್ಷಕರಂತೆ ಪೊಲೀಸರು ಘಟನೆಯನ್ನು ವೀಕ್ಷಿಸಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ.

ಸ್ಥಳೀಯ ಮಾಹಿತಿ ಪ್ರಕಾರ ಕೊಲೆಯಾದ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಆದ್ರೆ ಆತನ ಗುರುತು ಪತ್ತೆಯಾಗಿಲ್ಲ. ಮನಸ್ಸಿಗೆ ಬಂದಂತೆ ಥಳಿಸಿ ಕೊಲೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆ ಕೊಲೆ ಮಾಡುತ್ತಿದ್ದ ದೃಶ್ಯವನ್ನು ನೋಡುತ್ತ ನಿಂತಿದ್ದ ಪೊಲೀಸರನ್ನು ವಜಾ ಮಾಡಲಾಗಿದೆ.

ಲಾರಿಯಿಂದ ಇಳಿದ ವ್ಯಕ್ತಿ ಅಂಗಡಿಯೊಂದಕ್ಕೆ ನುಗ್ಗಿ ಗಲಾಟೆ ಶುರುಮಾಡಿದ್ದಾನೆ. ಇದಕ್ಕೆ ಅಂಗಡಿಯವರು ವಿರೋಧ ವ್ಯಕ್ತಪಡಿಸಿದ್ದು, ಗಲಾಟೆ ಶುರುವಾಗಿದೆ. ನೂರಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...