alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿಯಾಗಿದ್ದ ಯುವತಿಗೆ ಅಡುಗೆಯಾತ ಮಾಡಿದ್ದೇನು?

Cook, accomplice gag home-alone woman; flee with gold and valuablesಅನ್ನವಿಕ್ಕಿದ ಮನೆಗೆ ಕನ್ನ ಹಾಕಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೊಬ್ಬಳು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ತನ್ನ ಸಹಚರನೊಂದಿಗೆ ಆಗಮಿಸಿದ ಯುವತಿ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾತ ಆಕೆಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ ಹಣ, ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ಜಯನಗರದ 8 ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದ್ದು, ಪವನ್ ಜೈನ್ ಎಂಬವರ ಮನೆಯಲ್ಲಿ ಈ ಕೃತ್ಯವೆಸಗಲಾಗಿದೆ. ಪವನ್ ಜೈನ್ ಮತ್ತವರ ಪತ್ನಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದ ಹಿನ್ನಲೆಯಲ್ಲಿ ಅವರ ಪುತ್ರಿ ದಂತ ವೈದ್ಯೆ ಪ್ರತಿಭಾ ಜೈನ್ ಮನೆಯಲ್ಲಿದ್ದರು. ಇವರ ಮನೆಯಲ್ಲಿ ಜಾರ್ಖಂಡ್ ಮೂಲದ ದಿನೇಶ್ ಎಂಬಾತ ಕಳೆದ ಮೂರು ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ವಾಸಿಸುತ್ತಿದ್ದ.

ಸೋಮವಾರ ರಾತ್ರಿ ದಿನೇಶ್ ನನ್ನು ಕೇಳಿಕೊಂಡು ವ್ಯಕ್ತಿಯೊಬ್ಬ ಮನೆಗೆ ಬಂದಿದ್ದಾನೆ. ಪ್ರತಿಭಾ ಬಾಗಿಲು ತೆರೆಯಲು ಹಿಂದೇಟು ಹಾಕುತ್ತಿರುವಾಗಲೇ ದಿನೇಶ್, ಬಾಗಿಲು ತೆರೆದು ಅಪರಿಚಿತನನ್ನು ಬರ ಮಾಡಿಕೊಂಡಿದ್ದಾನೆ. ಬಳಿಕ ಇಬ್ಬರೂ ಸೇರಿ ಪ್ರತಿಭಾರಿಗೆ ಚಾಕು ತೋರಿಸಿ ಬೆದರಿಕೆ ಒಡ್ಡಿ, ಕೈ ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ತಮ್ಮ ಬಾಯಿಗೆ ಹಾಕಿದ್ದ ಟೇಪನ್ನು ಕಷ್ಟಪಟ್ಟು ತೆಗೆದ ಪ್ರತಿಭಾ ಸಹಾಯಕ್ಕಾಗಿ ಕೂಗಿದ್ದು, ಕೂಡಲೇ ಧಾವಿಸಿದ ನೆರೆಹೊರೆಯವರು ಲಾಕ್ ಆಗಿದ್ದ ಬಾಗಿಲನ್ನು ಒಡೆದು ಅವರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದಾರೆ. ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...