alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ವಕ್ತಾರರ ಮಗಳ ಮೇಲೆ ಅತ್ಯಾಚಾರದ ಬೆದರಿಕೆ

ಎಐಸಿಸಿ ವಕ್ತಾರರಾದ ಪ್ರಿಯಾಂಕ ಚತುರ್ವೇದಿಯವರಿಗೆ ಕಿಡಿಗೇಡಿಯೊಬ್ಬ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾನೆ.

ಮೈಕ್ರೋಬ್ಲಾಗಿಂಗ್ ಸೈಟ್ ಮತ್ತು ಮತ್ತು ಟ್ವಿಟ್ಟರ್ ಮೂಲಕ ಬೆದರಿಕೆ ಸಂದೇಶಗಳು ಬಂದಿವೆ. @ girishk1605 ಎಂಬಲ್ಲಿಂದ ಸಂದೇಶಗಳು ಬಂದಿದ್ದು, ಈ ಬಗ್ಗೆ ಪ್ರಿಯಾಂಕ ಚತುರ್ವೇದಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆದರಿಕೆಯ ಸಂದೇಶವನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಷೇರ್ ಮಾಡುವ ಮೂಲಕ ಪ್ರಿಯಾಂಕ ಚತುರ್ವೇದಿ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಆರೋಪಿ ಮತ್ತು ಪ್ರಿಯಾಂಕ ಅವರ ನಡುವೆ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಕಾವೇರಿದ ಚರ್ಚೆ ನಡೆದಿದೆ.

ಆನಂತರದಲ್ಲಿ ಆತನಿಂದ ಪ್ರಿಯಾಂಕ ಚತುರ್ವೇದಿಯವರಿಗೆ ಮಗಳನ್ನ ಅತ್ಯಾಚಾರ ಮಾಡೋದಾಗಿ ಬೆದರಿಕೆಯ ಸಂದೇಶಗಳು ಬಂದಿವೆ. ಕೆಲದಿನಗಳ ಹಿಂದೆ ಕೇಂದ್ರ ವಿದೇಶಾಂಗ ಸಚಿವೆಯಾದ ಸುಷ್ಮಾ ಸ್ವರಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ  ಇರಿಸುಮುರಿಸಿನ ಸನ್ನಿವೇಶವನ್ನ ಎದುರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...