alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ವಿಳಂಬವಾಗ್ತಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ

suicide_56899

ತನಗೆ ಮದುವೆ ಮಾಡುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದ 19 ವರ್ಷದ ಯುವಕನೊಬ್ಬ ಅವರು ಇನ್ನೂ ಸ್ವಲ್ಪ ಕಾಲ ಕಾಯುವಂತೆ ತಿಳಿಸಿದರೆಂಬ ಕಾರಣಕ್ಕೆ ಮನನೊಂದು ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ.

ಗುಜರಾತಿನ ಮಾಧವಪುರದ ನಿವಾಸಿ ಮುನ್ನಾ ದತ್ತಾನಿಯಾ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಆಕೆಯೊಂದಿಗೆ ವಿವಾಹವಾಗುವ ಪ್ರಸ್ತಾಪವನ್ನು ಮನೆಯವರ ಮುಂದಿಟ್ಟಿದ್ದು, ಈ ವಿವಾಹಕ್ಕೆ ಅವರು ವಿರೋಧಿಸದಿದ್ದರೂ ಮುನ್ನಾ ನಿರುದ್ಯೋಗಿಯಾಗಿದ್ದ ಕಾರಣ ಒಂದೆರೆಡು ವರ್ಷ ವಿವಾಹ ಬೇಡವೆಂದು ಹೇಳಿದ್ದಾರೆ.

ಒಳ್ಳೆಯ ಉದ್ಯೋಗ ಸಂಪಾದಿಸಿ, ಹಣ ಗಳಿಸಿದ ಬಳಿಕ ವಿವಾಹವಾಗುವಂತೆ ಮನೆಯಲ್ಲಿ ಸೂಚಿಸಿದ್ದು, ಇದರಿಂದ ನಿರಾಶನಾದ ಮುನ್ನಾ, ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಶವ ಮಾರನೇ ದಿನ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...