alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿನಲ್ಲಿ ಅಧ್ಯಾಪಕರ ಮೇಲೆ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿ

ಹರ್ಯಾಣದ ಸೋನಿಪತ್ ಕಾಲೇಜಿನಲ್ಲಿ ಭಯಾನಕ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬ ಕಾಲೇಜ್ ಸ್ಟಾಪ್ ರೂಂಗೆ ನುಗ್ಗಿ ಅಧ್ಯಾಪಕರೊಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಆರೋಪಿ ಪರಾರಿಯಾಗಿದ್ದು, ಅಧ್ಯಾಪಕರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪಿಪಲಿ ಗ್ರಾಮದ ದಲ್ಬಿರ್ ಸಿಂಗ್ ರಾಜಕೀಯ ಮಹಾವಿದ್ಯಾಲಯದಲ್ಲಿ ಘಟನೆ ನಡೆದಿದೆ. ಕಾಲೇಜ್ ಶಿಕ್ಷಕ ರಾಜೇಶ್ ಕೊಲೆಯಾದ ವ್ಯಕ್ತಿ. 2ನೇ ವರ್ಷದಲ್ಲಿ ಓದುತ್ತಿರುವ ಜಗ್ಮಾಲ್, ರಾಜೇಶ್ ನನ್ನು ಮೂರು ಬಾರಿ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ರಾಜೇಶ್ ಸ್ಟಾಪ್ ರೂಮಿನಲ್ಲಿರುವಾಗ ಅಲ್ಲಿಗ ಬಂದ ಜಗ್ಮಾಲ್ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ಕೇಳಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದಂಗಾಗಿದ್ದಾರೆ. ಘಟನಾ ಸ್ಥಳದಿಂದ ಜಗ್ಮಾಲ್ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆ ಕಾರ್ಯ ಶುರುವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ರಾಜೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...