alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋದಲ್ಲಿ ಬಂದವರು ಕ್ಲಬ್ ಡಾನ್ಸರ್ ಹೊತ್ತೊಯ್ದ್ರು

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ವಸಂತ್ಕುಂಜ್ ದಕ್ಷಿಣ ಪ್ರದೇಶದಲ್ಲಿ ಕ್ಲಬ್ ಡಾನ್ಸರ್ ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.

ಘಟನೆ ಮೇ.27ರಂದು ನಡೆದಿದೆ ಎನ್ನಲಾಗಿದೆ. ಮಾಲ್ ನ ಕ್ಲಬ್ ನಲ್ಲಿ ಡಾನ್ಸ್ ಕೆಲಸ ಮಾಡುವ ಯುವತಿ ರಾತ್ರಿ ಒಂದು ಗಂಟೆಗೆ ಆಟೋಗಾಗಿ ಕಾಯುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಯುವಕರು ಲಿಫ್ಟ್ ನೀಡುವುದಾಗಿ ಹೇಳಿದ್ದಾರೆ. ಯುವತಿ ನಿರಾಕರಿಸಿದ್ದಾಳೆ. ಸ್ಥಳಕ್ಕೆ ಪೊಲೀಸ್ ವಾಹನ ಬಂದಿದ್ದರಿಂದ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಪೊಲೀಸ್ ವಾಹನ ಹೋಗ್ತಿದ್ದಂತೆ ಮತ್ತೆ ಬಂದ ಯುವಕರು ಕಾರಿನಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ಐದು ಆರೋಪಿಗಳು ಅತ್ಯಾಚಾರವೆಸಗಿದ್ದು, ಒಬ್ಬ ಹೊಟ್ಟೆ ಮೇಲೆ ಒದೆ ನೀಡಿದ್ದಾನಂತೆ. ಅತ್ಯಾಚಾರವೆಸಗಿ ನಾಲ್ವರು ಓಡಿ ಹೋದ್ರೆ ಒಬ್ಬ ಮಾತ್ರ ನಶೆಯಲ್ಲಿ ಅಲ್ಲಿಯೇ ಬಿದ್ದಿದ್ದ. ಯುವತಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ನಾಲ್ವರನ್ನೂ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...