alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮಾರುಕಟ್ಟೆಗೆ ಹೋದಾಗ ಓಎನ್ಜಿಸಿ ಅಧಿಕಾರಿಯಿಂದ ಅತ್ಯಾಚಾರ

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ಐಷಾರಾಮಿ ಕಾಲೋನಿಯೊಂದರಲ್ಲಿ ಅತ್ಯಾಚಾರದ ಪ್ರಕರಣವೊಂದು ದಾಖಲಾಗಿದೆ. ಓಎನ್ಜಿಸಿ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಬಟ್ಟೆ ಇಸ್ತ್ರಿ ಮಾಡುವ ಮಹಿಳೆಯೊಬ್ಬಳು ಓಎನ್ಜಿಸಿ ಅಧಿಕಾರಿ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ.

ಮೂಲಗಳ ಪ್ರಕಾರ, ಓಎನ್ಜಿಸಿ ಅಧಿಕಾರಿ ಅನಿಲ್ ಕುಮಾರ್ ಮನೆಗೆ ಇಸ್ತ್ರಿ ಮಾಡುವ ಮಹಿಳೆಯೊಬ್ಬಳು ಶುಕ್ರವಾರ ಬಂದಿದ್ದಳಂತೆ. ಈ ವೇಳೆ ಮನೆಯಲ್ಲಿ ಆತನ ಪತ್ನಿ ಇರಲಿಲ್ಲ ಎನ್ನಲಾಗಿದೆ. ಮಹಿಳೆಯನ್ನು ಒಳಗೆ ಕರೆದು ಬಾಗಿಲು ಹಾಕಿಕೊಂಡ ಅನಿಲ್ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ಮುಂದುವರೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...