alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಯ ಸತ್ಯ ಬಿಚ್ಚಿಟ್ತು ಹುಡುಗಿ ಒಳ ಉಡುಪು

ಹಂತಕ ಎಷ್ಟೇ ಬುದ್ಧಿವಂತನಾಗಿದ್ದರೂ ಒಂದಲ್ಲ ಒಂದು ಸಾಕ್ಷ್ಯವನ್ನು ಬಿಡ್ತಾನೆ ಎಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. ಐದು ದಿನಗಳ ಹಿಂದೆ ದೆಹಲಿಯ ರಾಜೀವ್ ಚೌಕ್ ನಲ್ಲಿ ಸಿಕ್ಕ ಹುಡುಗಿ ಶವ ಪರಿಶೀಲನೆ ನಡೆಸಿದ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದೆ.

ಹುಡುಗಿ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಹುಡುಗಿ ಒಳ ಉಡುಪಿನಲ್ಲಿ ಒಂದು ಚೀಟಿ ಸಿಕ್ಕಿದೆ. ಚೀಟಿಯಲ್ಲಿ ಐದು ಮೊಬೈಲ್ ನಂಬರ್ ಇತ್ತು. ಇದ್ರ ಆಧಾರದ ಮೇಲೆ ಹುಡುಗಿ ಮನೆಯವರನ್ನು ತಲುಪಿದ ಪೊಲೀಸರಿಗೆ ಇದೊಂದು ಪ್ರೇಮಪ್ರಕರಣ ಎಂಬುದು ಗೊತ್ತಾಗಿದೆ.

ಕೊಲೆಯ ಭೀತಿಯಲ್ಲಿದ್ದ ಹುಡುಗಿ ಚೀಟಿಯಲ್ಲಿ ನಂಬರ್ ಬರೆದು ತನ್ನ ಒಳ ಉಡುಪಿನಲ್ಲಿಟ್ಟುಕೊಂಡಿದ್ದಳು ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಕ್ಟೋಬರ್ 27ರಂದು ರಾಜೀವ್ ಚೌಕ್ ಬಳಿ ಚೀಲವೊಂದು ಬಿದ್ದಿತ್ತು. ಅದ್ರಿಂದ ಕೆಟ್ಟ ವಾಸನೆ ಬರ್ತಿತ್ತು. ಚೀಲ ತೆಗೆದು ನೋಡಿದ ಪೊಲೀಸರಿಗೆ 17 ವರ್ಷದ ಹುಡುಗಿ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆ ವೇಳೆ ಸಿಕ್ಕ ಮೊಬೈಲ್ ನಂಬರ್ ಮೇಲೆ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಪೊಲೀಸರು ವಿಚಾರಣೆ ಮುಂದುವರೆಸಿದ್ರು.

ಕೆಲ ವರ್ಷಗಳಿಂದ ಮೃತ ಹುಡುಗಿ ಹಾಗೂ ಪಕ್ಕದ ಮನೆ ಹುಡುಗನ ನಡುವೆ ಪ್ರೀತಿಯಾಟ ನಡೆಯುತ್ತಿತ್ತಂತೆ. ಇಬ್ಬರೂ ಅನೇಕ ಬಾರಿ ಮನೆ ಬಿಟ್ಟು ಓಡಿ ಹೋಗಿದ್ದರಂತೆ. ಹುಡುಗಿ ಮನೆಯವರು ಅಪಹರಣ ಪ್ರಕರಣ ದಾಖಲಿಸಿ ಹುಡುಗನನ್ನು ಜೈಲಿಗೆ ಕಳುಹಿಸಿದ್ದರಂತೆ. ಆದ್ರೆ ಹುಡುಗ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಆತನ ಕುಟುಂಬಸ್ಥರು ಹುಡುಗಿ ಕುಟುಂಬದವರಿಗೆ ಧಮಕಿ ಹಾಕಿದ್ದರಂತೆ. ದೀಪಾವಳಿ ಮರುದಿನ ಹುಡುಗಿ ನಾಪತ್ತೆಯಾಗಿದ್ದಾಳೆ. ಆದ್ರೆ ಕುಟುಂಬಸ್ಥರು ಯಾವುದೇ ದೂರು ನೀಡಿರಲಿಲ್ಲ. ಅಕ್ಟೋಬರ್ 27ರಂದು ಹುಡುಗಿ ಶವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಂತಕನ ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...