alex Certify
ಕನ್ನಡ ದುನಿಯಾ       Mobile App
       

Kannada Duniya

ದೌರ್ಜನ್ಯದ ವಿರುದ್ಧ ದೂರು ನೀಡಿದ್ದಕ್ಕೆ ಬಹಿಷ್ಕಾರದ ಶಿಕ್ಷೆ

dalit

ಮದುವೆ ಸಮಾರಂಭವೊಂದರಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರ ವಿರುದ್ಧ ದೂರು ನೀಡಿದ್ದಕ್ಕೆ ಚತ್ತೀಸ್ ಗಢದ 3 ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಪಂಚಾಯ್ತಿ ಮುಖಂಡರು ಕುರುಧಿ ಗ್ರಾಮದಿಂದ್ಲೇ ಅವರನ್ನು ಹೊರಹಾಕಿದ್ದಾರೆ.

ಸಾಮಾಜಿಕ ಬಹಿಷ್ಕಾರದ ವಿರುದ್ಧ ನೊಂದ ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದು, ತನಿಖೆಗೆ ಆದೇಶಿಸಲಾಗಿದೆ. ದೂರು ನೀಡಿರುವ ಮಹಿಳೆಯೊಬ್ಬಳ ಮನೆಯಲ್ಲೇ ಮದುವೆಯಿತ್ತು. ಈ ಸಮಾರಂಭಕ್ಕೆ ಬಂದಿದ್ದ ಮಹಿಳೆಯರಿಗೆ ಕೆಲ ಪೋಲಿ ಯುವಕರು ಲೈಂಗಿಕ ಕಿರುಕುಳ ನೀಡಿದ್ದರು.

ವಧುವಿನ ಮನೆಗೆ ಬಂದಿದ್ದ ವರನ ಕಡೆಯ ಮಹಿಳೆಯರಿಗೆ ಯುವಕರು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಆರೋಪಿಗಳೆಲ್ಲ ಕುರುಧಿ ಗ್ರಾಮದ ನಿವಾಸಿಗಳು. ಅವರ ಕೃತ್ಯದ ಬಗ್ಗೆ ವಧುವಿನ ತಾಯಿ ದೂರು ದಾಖಲಿಸಿದ್ದಳು.

ಈ ವಿಚಾರ ಗೊತ್ತಾಗ್ತಿದ್ದಂತೆ ಪಂಚಾಯ್ತಿ ಸೇರಿದ ಊರ ಮುಖಂಡರು ದೂರು ನೀಡಿದ ಮಹಿಳೆಯ ಕುಟುಂಬ ಹಾಗೂ ಅವರ ಸಂಬಂಧಿಕರ ಇನ್ನೆರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ದೂರು ನೀಡಿದ ಮಹಿಳೆಯ ಮನೆಯಲ್ಲಿ ನೆರವೇರಬೇಕಿದ್ದ ಇನ್ನೊಂದು ಮದುವೆಯನ್ನು ನಡೆಸಿಕೊಡಲು ಪುರೋಹಿತರು ನಿರಾಕರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...