alex Certify
ಕನ್ನಡ ದುನಿಯಾ       Mobile App
       

Kannada Duniya

ನೆರೆಮನೆಯವರೊಂದಿಗೆ ಜಗಳವಾಡಿ ಠಾಣೆ ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆ

ನೆರೆಮನೆಯವರ ಕಾಟದಿಂದ ಬೇಸತ್ತ ಮಹಿಳೆಯೊಬ್ಬರು ಪೊಲೀಸ್ ಸ್ಟೇಷನ್ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ತಿರುವರ್ಕೂಡ್ನಲ್ಲಿ ನಡೆದಿದೆ. 30 ವರ್ಷದ ರೇವತಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಶೇಕಡಾ 82ರಷ್ಟು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ರೇವತಿ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ.

ರೇವತಿ ಮತ್ತು ಪಕ್ಕದ ಮನೆಯ ಅಮೃತವಳ್ಳಿ, ಕಸ್ತೂರಿ ಬಾ ನಗರದ ಒಂದೇ ವಠಾರದ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಬ್ಬರ ನಡುವೆ ಪದೇ ಪದೇ ಕಸ ಗುಡಿಸುವ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಪೊಲೀಸರ ಹೇಳಿಕೆಯ ಪ್ರಕಾರ ರೇವತಿಯ ಮನೆಯವರೇ ಜಗಳ ತೆಗೆಯುತ್ತಿದ್ದರಂತೆ. ಕೇವಲ ಬಾಯಿಮಾತಿನಲ್ಲಿದ್ದ ಗಲಾಟೆ ಆನಂತರದಲ್ಲಿ ಪೊಲೀಸ್ ಠಾಣೆಗೂ ತಲುಪಿತ್ತು. ಇಬ್ಬರನ್ನು ಕರೆದು ಪೊಲೀಸರು ಸಂಧಾನ ಮಾಡಿ ಕಳಿಸಿದ್ದರು.

ಆದ್ರೆ ಸೋಮವಾರ ಅಮೃತವಲ್ಲಿ, ರೇವತಿ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಇಬ್ಬರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಮಂಗಳವಾರ ಬೆಳಗ್ಗೆ ಪೊಲೀಸರ ಮುಂದೆ ರೇವತಿ ಮಾತ್ರ ಹಾಜರಾದ ಕಾರಣ ಪೊಲೀಸರು ರೇವತಿಗೆ ಊಟ ಮುಗಿಸಿಕೊಂಡು ಮಧ್ಯಾಹ್ನ ಬರುವಂತೆ ಸೂಚನೆ ನೀಡಿದ್ದಾರೆ.

ಆಗ ಮನೆಗೆ ತೆರಳಿದ ರೇವತಿ ವಾಪಸ್ಸು ಬರುವಾಗ ಬಾಟಲ್ನಲ್ಲಿ ಪೆಟ್ರೋಲ್ ತಂದು ಪೊಲೀಸ್ ಠಾಣೆಯ ಮುಂದೆಯೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಆನಂತರ ಪೊಲೀಸರೇ ಬೆಂಕಿಯನ್ನ ನಂದಿಸಿ ಅಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೇವತಿಯ ಪರಿಸ್ಥಿತಿ ಗಂಭೀರವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...