alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನು ಬೆಂಕಿಯಿಟ್ಟು ಕೊಂದ ಭಗ್ನ ಪ್ರೇಮಿ

ಚೆನ್ನೈನಲ್ಲಿ ಯುವತಿಯೊಬ್ಬಳ ಬೆನ್ನುಬಿದ್ದಿದ್ದ ಪೋಲಿ ಹುಡುಗನೊಬ್ಬ ಅವಳನ್ನು ಸಜೀವ ದಹನ ಮಾಡಿದ್ದಾನೆ. ಕಳೆದ ರಾತ್ರಿ ಅವಳ ಮನೆಗೇ ಬೆಂಕಿ ಹಚ್ಚಿದ್ದಾನೆ. ಈ ಕೃತ್ಯದಲ್ಲಿ ಯುವತಿ ಮೃತಪಟ್ಟಿದ್ದಾಳೆ. ಆಕೆಯ ಸಹೋದರಿ ಮತ್ತು ತಾಯಿ ಗಾಯಗೊಂಡಿದ್ದಾರೆ.

ಅಡಂಬಾಕ್ಕಮ್ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಇಂದುಜಾ ಅಂತಾ ಗುರುತಿಸಲಾಗಿದೆ. ಇಂದುಜಾಳ ತಾಯಿಯ ದೇಹ ಕೂಡ ಅರ್ಧಂಬರ್ಧ ಸುಟ್ಟು ಹೋಗಿದೆ. ಆಕೆಯನ್ನು ಕಿಲ್ಪೌಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಹೋದರಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ಕೆಲವು ದಿನಗಳಿಂದ ಆ ಯುವಕ ಇಂದುಜಾಳ ಬೆನ್ನುಬಿದ್ದಿದ್ದ. ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದ್ರೆ ಇಂದುಜಾ ನಿರಾಕರಿಸಿದ್ದರಿಂದ ಕೋಪದಲ್ಲಿ ಅವಳ ಮನೆಗೇ ಬೆಂಕಿ ಹಚ್ಚಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...