alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಅಮಲಲ್ಲಿ ನಡೀತು ಘೋರ ದುರಂತ

murder a 20

ಚೆನ್ನೈ: ಕಾಮುಕರಿಗೆ ಭಯ, ನಾಚಿಕೆ ಇರಲ್ಲ, ಅವರಿಗೆ ಆ ಕ್ಷಣಕ್ಕೆ ಆಸೆ ಪೂರೈಸಬೇಕಷ್ಟೇ. ಇಲ್ಲದಿದ್ದರೆ ಯಡವಟ್ಟು ಮಾಡುತ್ತಾರೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಸೆಕ್ಸ್ ಮಾಡಲು ಒಪ್ಪದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಜರುಗಿದೆ.

70 ವರ್ಷದ ಆಲಪ್ಪನ್ ಕೊಲೆಯಾದ ವ್ಯಕ್ತಿ. ಚೆನ್ನೈನ ಕ್ರೋಮ್ ಪೇಟೆಯ ಹೊಸ ಕಾಲೋನಿ ನಿವಾಸಿ, 52 ವರ್ಷದ ಬ್ಯಾಚುಲರ್ ವೆಂಕಟೇಶನ್ ಹಾಗೂ ಪೆರಿಯಾರ್ ನಗರ ನಿವಾಸಿ ಆಲಪ್ಪನ್ ಸ್ನೇಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಭಾನುವಾರ ರಜೆ ದಿನವಾಗಿದ್ದರಿಂದ ಸ್ನೇಹಿತರಿಬ್ಬರೂ, ಜೊತೆಗೆ ಮದ್ಯ ಸೇವಿಸಿ ಮನೆಯ ಮಹಡಿ ಮೇಲೆ ಮಲಗಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶನ್ ಗೆ ಕಾಮದ ಆಸೆ ಬಂದಿದೆ.

ಸ್ನೇಹಿತನ ಮೇಲೆ ಸೆಕ್ಸ್ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಆಲಪ್ಪನ್ ವಿರೋಧ ವ್ಯಕ್ತಪಡಿಸಿದ್ದು, ವೆಂಕಟೇಶನ್ ಕಾಟ ಹೆಚ್ಚಾದಾಗ, ಬೈದಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಸಿಟ್ಟಿನಲ್ಲಿ ಮರದ ತುಂಡಿನಿಂದ ತಿವಿದು ಸ್ನೇಹಿತನನ್ನು ಕೊಲೆ ಮಾಡಿದ್ದಾನೆ. ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ಮಹಡಿಯಿಂದ ಇಳಿದು ಪರಾರಿಯಾಗಲು ಯತ್ನಿಸಿ ತಾನೂ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಇದೀಗ ಜೀವನ್ಮರಣದ ಸ್ಥಿತಿಯಲ್ಲಿರುವ ವೆಂಕಟೇಶನ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...