alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯೆಯ ಸಾವಿಗೆ ಕಾರಣವಾಯ್ತು ಆತನ ಗೆಳೆತನ

chennai 25

ಚೆನ್ನೈ: ದಂತವೈದ್ಯೆಯೊಬ್ಬರು ತಮ್ಮ ಕ್ಲಿನಿಕ್ ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ. 27 ವರ್ಷದ ಸುಷ್ಮಿತಾ ಆತ್ಮಹತ್ಯೆ ಮಾಡಿಕೊಂಡವರು. ಪಾಂಡಿಚೇರಿ ಮೂಲದ ಸುಷ್ಮಿತಾ ಕೀಲಂಬಾಕಂನ ಸಾಯಿಬಾಬಾ ದೇವಸ್ಥಾನದ ರಸ್ತೆಯಲ್ಲಿ ವಾಸವಾಗಿದ್ದರು.

ಕೀಲಂಬಾಕಂನಲ್ಲಿ ಡೆಂಟಲ್ ಕ್ಲಿನಿಕ್ ಹೊಂದಿದ್ದ ಸುಷ್ಮಿತಾ, ನೆಲ್ಲಿಕುಪ್ಪಂನಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜ್ ನಲ್ಲಿ ಯೂ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಕಳೆದ ಶನಿವಾರ ರೋಗಿಯೊಬ್ಬ ಕ್ಲಿನಿಕ್ ಗೆ ಬಂದಿದ್ದು, ವೈದ್ಯೆ ಬೇರೆ ರೋಗಿಯನ್ನು ಪರೀಕ್ಷಿಸುತ್ತಿರಬಹುದೆಂದು ಅರ್ಧ ಗಂಟೆ ಕಾದಿದ್ದಾನೆ. ಆ ನಂತರ ಒಳಗೆ ಹೋಗಿ ನೋಡಿದಾಗ, ವೈದ್ಯೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮುಂದಿನ ಕ್ರಮಕೈಗೊಂಡಿದ್ದಾರೆ.

ಚೆಂಗಾಲ್ ಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಸುಷ್ಮಿತಾ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಸುಷ್ಮಿತಾ, ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದು, ಅವರ ನಡುವಿನ ತಪ್ಪು ಅಭಿಪ್ರಾಯ, ಆರ್ಥಿಕ ವ್ಯವಹಾರ ಈ ಘಟನೆಗೆ ಕಾರಣ ಎಂದು ತನಿಖೆ ಕೈಗೊಂಡಿರುವ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...