alex Certify
ಕನ್ನಡ ದುನಿಯಾ       Mobile App
       

Kannada Duniya

ದಂಪತಿಯ ಪ್ರಾಣವನ್ನೇ ತೆಗೆದಿದೆ ಮಾಂಸದಡುಗೆ ಜಗಳ

shadowy figure series

ಚೆನ್ನೈನ ಎರ್ನಾವೂರ್ ಎಂಬಲ್ಲಿ ಮಾಂಸದಡುಗೆ ಮಾಡಿಲ್ಲ ಅನ್ನೋ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಕೊಂದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೋಹನ್ ಹಾಗೂ ಸರಳಾ ದಂಪತಿ ತಮ್ಮ ಮೂವರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ರು.

ಭಾನುವಾರ ಮಧ್ಯಾಹ್ನ ಮೋಹನ್ ನ ಸಹೋದರಿ ಮನೆಗೆ ಬಂದಿದ್ಲು. ಅಂದು ಸರಳಾ ಮಾಂಸದ ಅಡುಗೆ ಮಾಡಿರಲಿಲ್ಲ. ಇದೇ ಕಾರಣಕ್ಕೆ ಕೆರಳಿದ್ದ ಮೋಹನ್ ಪತ್ನಿಯ ಜೊತೆಗೆ ಜಗಳವಾಡಿದ್ದ. ಆತನ ಸಹೋದರಿ ದಂಪತಿಯನ್ನು ಸಮಾಧಾನ ಮಾಡಿ ಸಂಜೆ ಹೊರಟಿದ್ಲು.

ಆಕೆ ತೆರಳಿದ ನಂತರ ಮತ್ತೆ ಮೋಹನ್ ಅದೇ ವಿಷಯ ತೆಗೆದು ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ರಾತ್ರಿವರೆಗೂ ಈ ಕಲಹ ಮುಂದುವರಿದಿತ್ತು. ಮಧ್ಯರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಎದ್ದು ಕುಳಿತ ಮೋಹನ್, ಪತ್ನಿಯ ಕತ್ತು ಹಿಸುಕಿ ಕೊಂದಿದ್ದಾನೆ. ಹಿರಿ ಮಗಳು ಈ ಕೃತ್ಯವನ್ನು ನೋಡಿದ್ದಾಳೆ.

ಆದ್ರೆ ಭಯದಿಂದಾಗಿ ವಿಷಯ ಬಾಯ್ಬಿಟ್ಟಿಲ್ಲ, ಸುಮ್ಮನೆ ಮಲಗಿದ್ದಾಳೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮೋಹನ್ ಕೂಡ ಮನೆಯ ಬಾತ್ ರೂಮಿನಲ್ಲಿ ನೇಣಿಗೆ ಶರಣಾಗಿದ್ದ. ಮಾಂಸದಡುಗೆಯ ಕ್ಷುಲ್ಲಕ ಜಗಳದಿಂದಾಗಿ ಮೂವರು ಪುಟ್ಟ ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...