alex Certify
ಕನ್ನಡ ದುನಿಯಾ       Mobile App
       

Kannada Duniya

ಸಮುದ್ರ ತೀರದಲ್ಲಿ ಜರ್ಮನ್ ಯುವತಿ ಮೇಲೆ ಅತ್ಯಾಚಾರ

rape

ತಮಿಳುನಾಡಿನ ಸಮುದ್ರತೀರದಲ್ಲಿ ನಿದ್ದೆ ಮಾಡ್ತಾ ಇದ್ದ ಜರ್ಮನ್ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಜರ್ಮನಿಯ ಮೂರು ಕುಟುಂಬಗಳು ಒಟ್ಟಾಗಿ ಭಾರತ ಪ್ರವಾಸಕ್ಕೆ ಬಂದಿದ್ದವು. ಅವರಲ್ಲಿ 24 ವರ್ಷದ ಈ ಯುವತಿ ಕೂಡ ಒಬ್ಬಳು. ಐವರು ಶನಿವಾರ ಮಹಾಬಲಿಪುರಂಗೆ ಬಂದಿದ್ದಾರೆ. ತೆಲುಗರ್ ತೊಟ್ಟಂನಲ್ಲಿ ಸಮುದ್ರ ವೀಕ್ಷಣೆಗೆ ಬಂದಿದ್ದ ಇವರು, ಕಿನಾರೆಯ ಉದ್ದಕ್ಕೂ ಸಂಚರಿಸಿದ್ದಾರೆ. ಕೊನೆಗೆ ಸಮುದ್ರ ತೀರದಲ್ಲೇ ಮಲಗಿ ನಿದ್ದೆ ಹೋಗಿದ್ದಾರೆ.

ನಾಲ್ವರು ಒಂದ್ಕಡೆ ಮಲಗಿದ್ರೆ, ಈ ಯುವತಿ ಒಂಟಿಯಾಗಿ ಬೇರೆಡೆ ನಿದ್ದೆ ಮಾಡ್ತಾ ಇದ್ಲು. ಅದನ್ನು ಗಮನಿಸಿದ ಮೂವರು ಅವಳಿದ್ದಲ್ಲಿಗೆ ಬಂದಿದ್ದಾರೆ. ಓರ್ವ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಕಷ್ಟಪಟ್ಟು ಕಾಮುಕರ ಕೈಯಿಂದ ತಪ್ಪಿಸಿಕೊಂಡ ಯುವತಿ ತನ್ನ ಗುಂಪನ್ನು ಸೇರಿಕೊಂಡ್ಲು. ನಂತರ ಅವರು ಘಟನೆ ಬಗ್ಗೆ ದೆಹಲಿಯಲ್ಲಿರುವ ಜರ್ಮನ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಕಾಂಚಿಪುರಂ ಪೊಲೀಸರು ನೊಂದ ಯುವತಿ ಬಳಿ ಹೇಳಿಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಕೃತ್ಯ ಎಸಗಿದವರು ಬೀಚ್ ಹೌಸ್ ನಲ್ಲಿದ್ದ ಅತಿಥಿಗಳೋ ಅಥವಾ ಮೀನುಗಾರರೋ ಅನ್ನೋದು ಪೊಲೀಸರಿಗೆ ಸ್ಪಷ್ಟವಾಗಿಲ್ಲ. ಆದಷ್ಟು ಬೇಗ ಆರೋಪಿಯನ್ನು ಬಂಧಿಸೋದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...