alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್ ರೂಂನಲ್ಲಿ ಪತಿಗೆ ದ್ರೋಹ ಮಾಡಿದ ಪತ್ನಿ..

wife-relationship-

ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ದ್ರೋಹ ಮಾಡಿದ್ರೆ ಅದು ಆಘಾತವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ಗಂಡನ ಮನೆಯಲ್ಲಿ ವಾಸವಾಗಿದ್ದ ಪತ್ನಿ ಶಾರೀರಿಕ ಸಂಬಂಧ ಬೆಳೆಸ್ತಾ ಇದ್ದುದ್ದು ಮಾತ್ರ ಪರ ಪುರುಷನ ಜೊತೆ. ಇದರಿಂದ ನೊಂದಿದ್ದ ಪತಿ ತನ್ನ ಹೆಂಡತಿ ದ್ರೋಹವನ್ನು ಹೊರಗೆಳೆಯಲು ಮಾಡಿದ ಪ್ಲಾನ್ ಕೇಳಿದ್ರೆ ನಿಮಗೆ ಆಶ್ಚರ್ಯವಾಗುತ್ತೆ.

ಕರ್ನಾಟಕದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಗೆ 2015 ರಲ್ಲಿ ತನ್ನ ಪತ್ನಿ ನಡವಳಿಕೆ ಮೇಲೆ ಸಂದೇಹ ಶುರುವಾಗಿದೆ. ಮನೆಯಲ್ಲಿ ಸಿಗರೇಟ್ ಚೂರು ಸಿಕ್ಕಾಗ ಆತ ಮತ್ತಷ್ಟು ಅನುಮಾನಗೊಂಡಿದ್ದಾನೆ. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ಆಕೆ ಎಲ್ಲ ಸುಳ್ಳು ಎಂದಿದ್ದಾಳೆ. ಆದ್ರೂ ಪತ್ನಿ ದ್ರೋಹವನ್ನು ಹೊರಗೆಳೆಯಲು ಮುಂದಾದ ಪತಿ, ಬೆಡ್ ರೂಂನಲ್ಲಿ ಕ್ಯಾಮರಾ ಇಟ್ಟಿದ್ದಾನೆ. ಕ್ಯಾಮರಾ ಇಟ್ಟು ಮೂರು ತಿಂಗಳು ಯಾವುದೇ ಕುರುಹು ಸಿಗಲಿಲ್ಲ. ಆಗ ಮನೆಯ ಇತರ ಕಡೆ ಮತ್ತೆರಡು ಕ್ಯಾಮರಾ ಅಳವಡಿಸಿದ್ದಾನೆ ಪತಿ.

ಜೊತೆಗೆ ಪತ್ನಿಯ ಫೋನನ್ನು ಅಪ್ಲಿಕೇಷನ್ ಸಹಾಯದಿಂದ ಲ್ಯಾಪ್ ಟಾಪ್ ಗೆ ಸಂಪರ್ಕಿಸಿದ್ದಾನೆ. ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್ ಮಾತುಕತೆ ಇದರಲ್ಲಿ ರೆಕಾರ್ಡ್ ಆಗಿದೆ. ಪತ್ನಿ ಬಾಯ್ ಫ್ರೆಂಡ್ ಗೆ ಗರ್ಭನಿರೋಧಕ ತರುವಂತೆ ಹೇಳಿದ್ದಾಳೆ. ಅಲ್ಲದೆ ಅಡುಗೆ ಮನೆ ಹಾಗೂ ಬೆಡ್ ರೂಂನಲ್ಲಿ ಅವರಿಬ್ಬರು ಸಂಬಂಧ ಬೆಳೆಸಿದ್ದಾರೆ. ಅದು ಮೂರು ವರ್ಷದ ಮಗು ಇನ್ನೊಂದು ಕೋಣೆಯಲ್ಲಿ ಮಲಗಿದ್ದಾಗ ಈ ಕಾರ್ಯಕ್ಕಿಳಿದಿದ್ದಾಳೆ ಪತ್ನಿ.

ದ್ರೋಹ ಬೆಳಕಿಗೆ ಬರ್ತಾ ಇದ್ದಂತೆ ಪತಿ ಕೋರ್ಟ್ ಮೊರೆ ಹೋಗಿದ್ದಾನೆ. ನ್ಯಾಯಾಲಯ ಪ್ರಕರಣವನ್ನು ಮಧ್ಯವರ್ತಿ ಸೆಂಟರ್ ಗೆ ರವಾನಿಸಿದೆ. ಅಲ್ಲಿ ಇವರಿಬ್ಬರಿಗೂ ಬಿಡುಗಡೆ ಸಿಕ್ಕಿದೆ. ಮಗುವನ್ನು ತಂದೆ ಬಳಿ ನೀಡಲು ಒಪ್ಪಿಗೆ ನೀಡಲಾಗಿದೆ. ಇಬ್ಬರು ನಂಬಿಕೆ ಕಳೆದುಕೊಂಡಿದ್ದರಿಂದಲೇ ಸಂಬಂಧ ಹಾಳಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...