alex Certify
ಕನ್ನಡ ದುನಿಯಾ       Mobile App
       

Kannada Duniya

14 ವರ್ಷದ ವಿದ್ಯಾರ್ಥಿ ಜೊತೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ಲು 34ರ ಶಿಕ್ಷಕಿ

ಗುರು-ಶಿಷ್ಯರ ಸಂಬಂಧ ಬಹಳ ಪವಿತ್ರವಾದದ್ದು. ಚಂಡೀಗಢದಿಂದ ಬಂದ ಸುದ್ದಿಯೊಂದು ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತಂದಿದೆ. 34 ವರ್ಷದ ಶಿಕ್ಷಕಿಯೊಬ್ಬಳು 14 ವರ್ಷದ ವಿದ್ಯಾರ್ಥಿ ಜೊತೆ ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕಿಯನ್ನು ಬಂಧಿಸಿದ್ದಾರೆ.

ಪೀಡಿತ ಅಪ್ರಾಪ್ತ ವಿದ್ಯಾರ್ಥಿಗೆ ಟ್ಯೂಷನ್ ಹೇಳಿಕೊಡ್ತಿದ್ದ ಶಿಕ್ಷಕಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದಳು. ಜೊತೆಗೆ ರಾತ್ರಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಳು. ವಿಷ್ಯ ಹೊರಗೆ ಬರ್ತಿದ್ದಂತೆ 2 ಮಕ್ಕಳ ತಾಯಿ ಶಿಕ್ಷಕಿ ಅಪ್ರಾಪ್ತನನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದಿದ್ದಾಳೆ.

ಗಂಡನ ಮನೆ ಹಾಗೂ ಪೀಡಿತನ ಮನೆಯಲ್ಲಿ ಗಲಾಟೆ ಮಾಡಿದ ಮಹಿಳೆ, ಕೋಣೆಯಲ್ಲಿ ವಿದ್ಯಾರ್ಥಿಯನ್ನು ಕೂಡಿ ಹಾಕಿ ಆತ್ಮಹತ್ಯೆ ನಾಟಕವಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಶಿಕ್ಷಕಿಯನ್ನು ಬಂಧಿಸಿದ್ದಾರೆ. ಶಿಕ್ಷಕಿ ಪೀಡಿತನ ಮನೆ ಹತ್ತಿರದಲ್ಲಿದ್ದಳು. ಹಾಗಾಗಿ 2017ರಿಂದ ಪೀಡಿತನನ್ನು ಟ್ಯೂಷನ್ ಗೆ ಸೇರಿಸಿದ್ದರು. ಮೊದಲು ಪೀಡಿತನ ಸಹೋದರಿ ಕೂಡ ಟ್ಯೂಷನ್ ಗೆ ಹೋಗ್ತಿದ್ದಳು. ಸುಳ್ಳು ನೆಪ ಹೇಳಿ ಸಹೋದರಿ ಟ್ಯೂಷನ್ ಬಿಡಿಸಿದ್ದಳು ಶಿಕ್ಷಕಿ. ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗೆ ಮೊಬೈಲ್ ನೀಡಿದ್ದ ಶಿಕ್ಷಕಿ ಅಶ್ಲೀಲ ದೃಶ್ಯಗಳನ್ನು ಕಳುಹಿಸುತ್ತಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...