alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಯಲ್ಲಿ ಪಾಸ್ ಮಾಡುವ ಭರವಸೆ ನೀಡಿ ಪ್ರಾಂಶುಪಾಲನ ನೀಚ ಕೃತ್ಯ

ಚಂಡೀಗಢದ ಸೋನಿಪತ್ ನಲ್ಲಿ ಶಾಲಾ ಪ್ರಾಂಶುಪಾಲರೊಬ್ಬರು ಬೋರ್ಡ್ ಎಕ್ಸಾಮ್ ನಲ್ಲಿ ಪಾಸ್ ಮಾಡುವುದಾಗಿ ಆಮಿಷವೊಡ್ಡಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇಬ್ಬರು ಮಹಿಳೆಯರ ಸಹಾಯದಿಂದ ಪ್ರಾಂಶುಪಾಲ ಈ ನೀಚ ಕೃತ್ಯ ಎಸಗಿದ್ದಾನೆ.

16 ವರ್ಷದ ಬಾಲಕಿ ಮತ್ತು ಅವಳ ತಂದೆಯನ್ನು ಪ್ರಾಂಶುಪಾಲ ಶಾಲೆಗೆ ಬರಹೇಳಿದ್ದ. ಬಾಲಕಿಯನ್ನು ನನ್ನ ಸಂಬಂಧಿಕರ ಮನೆಯಲ್ಲಿ ಬಿಡಿ, ಬೇರೊಬ್ಬ ವಿದ್ಯಾರ್ಥಿನಿ ಅವಳ ಬದಲು ಪರೀಕ್ಷೆ ಬರೆಯುತ್ತಾಳೆ ಅಂತಾ ತಂದೆಗೆ ಹೇಳಿದ್ದ. ಪರೀಕ್ಷೆ ಮುಗಿದ ಬಳಿಕ ಬಾಲಕಿಯನ್ನು ಕರೆದೊಯ್ಯುವಂತೆ ಸೂಚಿಸಿದ್ದ.

ಅದನ್ನು ನಂಬಿ ತಂದೆ ತನ್ನ ಮಗಳನ್ನು ಪ್ರಾಂಶುಪಾಲ ಹೇಳಿದ ಮನೆಯಲ್ಲಿ ಬಿಟ್ಟು ಹೋಗಿದ್ದ. 3-4 ಗಂಟೆಗಳ ಬಳಿಕ ಮಗಳನ್ನು ಕರೆದೊಯ್ಯಲು ಬಂದಾಗ ಪ್ರಾಂಶುಪಾಲನ ಅಸಲಿಯತ್ತು ಬಯಲಾಗಿದೆ. ಆತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ.

ಪರೀಕ್ಷೆಯಲ್ಲಿ ಬಾಲಕಿಯನ್ನು ಪಾಸ್ ಮಾಡಿಸುತ್ತೇನೆ, 10,000 ರೂಪಾಯಿ ಕೊಡಿ ಅಂತಾನೂ ಮೊದಲು ತಂದೆಯ ಬಳಿ ಕೇಳಿದ್ದ. ಪೊಲೀಸರು ಮೂವರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ. ಆದ್ರೆ ಮೂವರೂ ತಲೆಮರೆಸಿಕೊಂಡಿದ್ದು, ಇದುವರೆಗೂ ಸಿಕ್ಕಿಬಿದ್ದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...