alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಚಂಡೀಗಢದಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದು ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಸತ್ಯವೊಂದು ಹೊರಬಿದ್ದಿದೆ. ಬಾಲಕಿ ಇನ್ನೊಬ್ಬ ಮಾವನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಡಿ ಎನ್ ಎ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.

ಚಂಡೀಗಢದ  ಬಾಲಕಿ ಮೇಲೆ ಆಕೆ ಮಾವ ಅತ್ಯಾಚಾರವೆಸಗಿದ್ದಾನೆಂಬ ಆರೋಪದ ಮೇಲೆ ಆತನಿಗೆ ಜೈಲು ಶಿಕ್ಷೆಯಾಗಿದೆ. ಆದ್ರೆ ಡಿ ಎನ್ ಎ ಪರೀಕ್ಷೆಯಲ್ಲಿ ಬಂದ ವರದಿ ನೆಗೆಟಿವ್ ಆಗಿದ್ದರಿಂದ ಪೊಲೀಸರು ಮತ್ತೊಮ್ಮೆ ಬಾಲಕಿಯ ಕೌನ್ಸಿಲಿಂಗ್ ನಡೆಸಿದ್ದಾರೆ. ಈ ವೇಳೆ ಬಾಲಕಿ ಇನ್ನೊಬ್ಬ ಮಾವನ ಹೆಸರು ಹೇಳಿದ್ದಾಳೆ. ಆತನನ್ನು ಬಂಧಿಸಿದ ಪೊಲೀಸರು ಡಿ ಎನ್ ಎ ಪರೀಕ್ಷೆ ನಡೆಸಿದ್ದಾರೆ. ಆಗ ಸತ್ಯ ಹೊರಬಿದ್ದಿದೆ.

ಡಿ ಎನ್ ಎ ವರದಿಯನ್ನು ಕೋರ್ಟ್ ಗೆ ನೀಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಕೋರ್ಟ್ ನಲ್ಲಿ ಆರೋಪಿ ಮಾವನ ವಿಚಾರಣೆ ಸದ್ಯದಲ್ಲಿಯೇ ನಡೆಯಲಿದೆ. ಬಾಲಕಿ 7 ತಿಂಗಳ ಗರ್ಭಿಣಿಯಾದಾಗ ಸತ್ಯ ಗೊತ್ತಾಗಿತ್ತು. ಗರ್ಭಪಾತಕ್ಕೆ ಒತ್ತಾಯಿಸಿ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಾಲಕಿ ಆಗಸ್ಟ್ 17ರಂದು ಮಗುವಿಗೆ ಜನ್ಮ ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...