alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ನಡೆಯುತ್ತಿತ್ತು ಮಕ್ಕಳ ಪೋರ್ನ್ ರಾಕೆಟ್

ಸಿಬಿಐ ಗುರುವಾರ ಅಂತರಾಷ್ಟ್ರೀಯ ಮಕ್ಕಳ ಅಶ್ಲೀಲ ರಾಕೆಟ್ ಬಣ್ಣ ಬಯಲು ಮಾಡಿದೆ. ಈ ರಾಕೆಟ್ ವಾಟ್ಸಾಪ್ ಗ್ರೂಪ್ ಮೂಲಕ ನಡೆಯುತ್ತಿತ್ತು. ಇದ್ರಲ್ಲಿ ದೇಶ-ವಿದೇಶದ ವ್ಯಕ್ತಿಗಳಿದ್ದಾರೆ ಎನ್ನಲಾಗಿದೆ. 199 ಸದಸ್ಯರ ವಾಟ್ಸಾಪ್ ಗ್ರೂಪ್ ನಲ್ಲಿ ಮಕ್ಕಳ ಪೋರ್ನ್ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲಾಗ್ತಾಯಿತ್ತು.

ಭಾರತದ ಐದು ಮಂದಿ ಈ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ಆಗಿದ್ದಾರೆ. ಕನೌಜ್ ನ ನಿಖಿಲ್ ವರ್ಮಾವನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಇಬ್ಬರು ಹಾಗೂ ಮುಂಬೈ, ನೋಯ್ಡಾದ ಒಬ್ಬೊಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮೊಬೈಲ್, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ.

ಇದು ಸಾಮಾನ್ಯ ವಾಟ್ಸಾಪ್ ಗ್ರೂಪ್ ಅಲ್ಲ. ಇದ್ರಲ್ಲಿ ಯುಎಸ್ಎ, ಚೀನಾ, ಮೆಕ್ಸಿಕೊ, ಅಫ್ಘಾನಿಸ್ತಾನ, ಬ್ರೆಜಿಲ್, ಪಾಕಿಸ್ತಾನ, ಶ್ರೀಲಂಕಾ, ನೈಜೀರಿಯಾ ಮತ್ತು ಕೀನ್ಯಾ ದೇಶಗಳ ಜನರಿದ್ದಾರೆ. ಆರೋಪಿಗಳ ವಿಚಾರಣೆ ನಂತ್ರ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...