alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಜೊತೆ ಮಾತನಾಡಿದ ತಪ್ಪಿಗೆ ಇಂಥಾ ಘೋರ ಶಿಕ್ಷೆ

ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ಬಾಲಕಿ ಜೊತೆ ಮಾತನಾಡಿದ್ದಾರೆ ಅನ್ನೋ ಕಾರಣಕ್ಕೆ ಇಬ್ಬರು ಯುವಕರಿಗೆ ಚಿತ್ರಹಿಂಸೆ ನೀಡಲಾಗಿದೆ.

ಅವರಲ್ಲಿ ಒಬ್ಬ ಯುವಕ ಬಾಲಕಿ ಜೊತೆಗೆ ಅಫೇರ್ ಹೊಂದಿದ್ದ, ಅವಳನ್ನೇ ಮದುವೆಯಾಗಲು ಇಚ್ಛಿಸಿದ್ದ ಅಂತಾ ಹೇಳಲಾಗ್ತಿದೆ. ಇಬ್ಬರೂ ಯುವಕರನ್ನು ಹಿಡಿದು ಥಳಿಸಿದ ಗ್ರಾಮಸ್ಥರು ಅವರ ತಲೆ ಬೋಳಿಸಿದ್ದಾರೆ. ನಂತರ ಅವರ ಬಟ್ಟೆ ಕಳಚಿ, ನಗ್ನವಾಗಿ ಬಿಸಿಬಿಸಿ ಮರಳಿನ ಮೇಲೆ ನಿಲ್ಲಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಗ್ರಾಮಸ್ಥರು ಇಬ್ಬರಿಗೂ ಚಪ್ಪಲಿ ಹಾರ ಹಾಕಿ, ವಿವಸ್ತ್ರವಾಗಿ ಊರ ತುಂಬಾ ಮೆರವಣಿಗೆ ಕೂಡ ಮಾಡಿದ್ದಾರೆ.

ಮತ್ತೆ ಈ ಗ್ರಾಮದ ಕಡೆ ತಲೆ ಹಾಕದಂತೆ ಊರ ಮುಖಂಡರು ಕಟ್ಟಾಜ್ಞೆ ಮಾಡಿದ್ರು. ಅದಕ್ಕೆ ಯುವಕರು ಸಮ್ಮತಿಸಿದ ಬಳಿಕ ಅವರನ್ನು ಬಿಟ್ಟು ಕಳಿಸಲಾಗಿತ್ತು. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಇದೀಗ ಓರ್ವ ನೊಂದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...