alex Certify
ಕನ್ನಡ ದುನಿಯಾ       Mobile App
       

Kannada Duniya

ವಿ.ಆರ್.ಎಸ್. ಪಡೆದು ವೇಶ್ಯಾವಾಟಿಕೆ ನಡೆಸ್ತಿದ್ದ…!

ಭೋಪಾಲ್ ನ ನ್ಯೂ ಸಿಟಿಯಲ್ಲಿ ಮತ್ತೊಂದು ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಕಾಲ್ ಗರ್ಲ್, ಬ್ರೋಕರ್ ಹಾಗೂ ಗ್ರಾಹಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಲ್ಲಾಳಿ ರಾಜಸ್ತಾನ ರೈಫಲ್ ರೆಜಿಮೆಂಟ್ ಆಗಿದ್ದನಂತೆ. ಬೇಡಿಕೆಗೆ ತಕ್ಕಂತೆ ದೆಹಲಿ, ಮುಂಬೈ, ಬಿಹಾರ ಹಾಗೂ ಗುಜರಾತಿನಿಂದ ಕಾಲ್ ಗರ್ಲ್ಸ್ ಕರೆಯಿಸಿಕೊಂಡು ವ್ಯವಹಾರ ನಡೆಸುತ್ತಿದ್ದನಂತೆ.

ಕಾರಿನ ಹಿಂಬದಿ ಸೀಟಿನಲ್ಲಿ ಗ್ರಾಹಕರ ಜೊತೆಗಿದ್ದ ಕಾಲ್ ಗರ್ಲ್ ಹಾಗೂ ಚಾಲಕನ ಕೆಲಸ ಮಾಡ್ತಿದ್ದ ದಲ್ಲಾಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಲ್ ಗರ್ಲ್ 8 ದಿನಗಳ ಹಿಂದೆ ಭೋಪಾಲ್ ಗೆ ಬಂದಿದ್ದಳಂತೆ. ಗ್ರಾಹಕರೊಬ್ಬರಿಂದ 12 ಸಾವಿರ ರೂಪಾಯಿ ವಸೂಲಿ ಮಾಡ್ತಿದ್ದ ದಲ್ಲಾಳಿ ದಿಲೀಪ್ 4 ಸಾವಿರ ರೂಪಾಯಿಯನ್ನು ಕಾಲ್ ಗರ್ಲ್ ಗೆ ನೀಡುತ್ತಿದ್ದನಂತೆ.

ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಗ್ರಾಹಕರನ್ನು ದಿಲೀಪ್ ಸಂಪರ್ಕಿಸುತ್ತಿದ್ದನಂತೆ. 2003 ರಲ್ಲಿ ರಾಜಸ್ಥಾನದ ರೈಫಲ್ ರೆಜಿಮೆಂಟ್ ಆಗಿದ್ದ ದಿಲೀಪ್ 2011 ರಲ್ಲಿ ವಿ ಆರ್ ಎಸ್ ಪಡೆದಿದ್ದ. ಕಳೆದ ನಾಲ್ಕು ವರ್ಷಗಳಿಂದ ಇದೇ ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...