alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಬ್ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಮಹಿಳೆಯೊಬ್ಬಳನ್ನು ಒತ್ತಾಯವಾಗಿ ಕ್ಯಾಬ್ ನಲ್ಲಿ ಕರೆದೊಯ್ದು, ಲೈಂಗಿಕವಾಗಿ ಕಿರುಕುಳ ನೀಡಿ, ಆಕೆಯನ್ನು ಹೈವೇಯಲ್ಲಿ ಎಸೆದು ಹೋದ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಬೆಳಗ್ಗೆ 4 ಗಂಟೆ ವೇಳೆಗೆ ಮುಂಬೈನ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಟ್ಯಾಕ್ಸಿಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಕ್ಯಾಬ್ನಲ್ಲಿ ಆಕೆಯನ್ನು ಎಳೆದೊಯ್ಯಲಾಯ್ತು. ಕ್ಯಾಬ್ ಡ್ರೈವರ್ ನೀರಜ್ ಚೌಧರಿ ಹಾಗೂ ಆತನ ಸ್ನೇಹಿತ ರಾಜೇಶ್ ಯಾದವ್ ಸೇರಿ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆನ್ನಲಾಗಿದೆ. ನಂತರ ಆಕೆಯ ಪರ್ಸ್ ಹಾಗೂ ಮೊಬೈಲ್ ಅನ್ನು ತೆಗೆದುಕೊಂಡು ಆಕೆಯನ್ನು ಹೈವೇಯಲ್ಲೆಸೆದು ಪರಾರಿಯಾಗಿದ್ದಾರೆ.

ಆ ಮಹಿಳೆ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...