alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಅಪಹರಿಸಿ ರಾತ್ರಿ ಊರು ಸುತ್ತಿದ್ರು ಖದೀಮರು

ಹರ್ಯಾಣದ ಯಮುನಾ ನಗರದ ಸಾಗರ್ ಸ್ಟೀಲ್ ಮಾಲೀಕ ಗುರುಮುಕುಂದ್ ದಾಸ್ ಮಗಳು ಮುಸ್ಕಾನ್ ಳನ್ನು ಬುಧವಾರ ಸಂಜೆ ಅಪಹರಣ ಮಾಡಲಾಗಿತ್ತು. ಪೊಲೀಸ್ ಪ್ರಕಾರ ಗುರುವಾರ ಸಂಜೆ ಮುಸ್ಕಾನ್ ಮನೆಗೆ ವಾಪಸ್ ಬಂದಿದ್ದಾಳೆ. ಅಪಹರಣಾಕಾರರು ಬುಧವಾರ ರಾತ್ರಿ ಪೂರ್ತಿ ಮುಸ್ಕಾನ್ ಬಾಯಿಗೆ ಬಟ್ಟೆ ಕಟ್ಟಿ ಇಡೀ ಊರು ಸುತ್ತಿಸಿದ್ದಾರೆ ಎನ್ನಲಾಗಿದೆ. ಆದ್ರೆ ಮುಸ್ಕಾನ್ ಭಯಗೊಂಡಿದ್ದು, ವಿಚಾರಣೆ ನಂತ್ರ ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.

ಮಾಹಿತಿ ಪ್ರಕಾರ, ಬುಧವಾರ ಟ್ಯೂಷನ್ ಗೆ ಹೋದ ಮುಸ್ಕಾನ್ ಮನೆಗೆ ಬಂದಿರಲಿಲ್ಲ. ಅನೇಕ ಬಾರಿ ಕರೆ ಮಾಡಿದ್ರೂ ಮುಸ್ಕಾನ್ ಪೋನ್ ಎತ್ತಿಕೊಂಡಿರಲಿಲ್ಲ. ನಂತ್ರ ಯುವಕನೊಬ್ಬ ಫೋನ್ ರಿಸಿವ್ ಮಾಡಿ ಧಮಕಿ ಹಾಕಿದ್ದಾನೆ. ಒಂದುವರೆ ಕೋಟಿ ರೂಪಾಯಿ ನೀಡುವಂತೆ ಹೇಳಿದ್ದಾನೆ. ಸ್ವಲ್ಪ ಕಡಿಮೆ ಮಾಡಿಕೊಳ್ಳುವಂತೆ ಮುಸ್ಕಾನ್ ತಂದೆ ಮನವಿ ಮಾಡಿದ್ದು ಅಪಹರಣಕಾರರು ಹಣವನ್ನು 1 ಕೋಟಿಗೆ ಇಳಿಸಿದ್ದಾರೆ.

ಕರೆ ಆಧಾರದ ಮೇಲೆ ಮುಸ್ಕಾನ್ ಹುಡುಕಾಟ ಶುರುಮಾಡಿದ ಪೊಲೀಸರಿಗೆ ಆರೋಪಿಗಳು ಮುಸ್ಕಾನ್ ಐ-20 ಕಾರಿನಲ್ಲಿ ಸುತ್ತಾಡುತ್ತಿದ್ದಾರೆಂಬ ವಿಷ್ಯ ಗೊತ್ತಾಗಿದೆ. ಅಷ್ಟರಲ್ಲೆ ಎಚ್ಚೆತ್ತ ಅಪಹರಣಾಕಾರರು ಮುಸ್ಕಾನ್ ಜೊತೆ ಕಾರ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...