alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ಉದ್ಯಮಿ

ದರೋಡೆ ಮಾಡಿಕೊಂಡು ಹೋದವರನ್ನು ದರೋಡೆಗೆ ಒಳಗಾದ ಉದ್ಯಮಿಯೇ ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಪ್ರಕರಣವೊಂದು ವರದಿಯಾಗಿದೆ. ಮಂಗಳವಾರ ರಾತ್ರಿ 11.45 ರ ಸುಮಾರಿಗೆ ದೆಹಲಿಯಲ್ಲಿ ಈ ಪ್ರಕರಣ ನಡೆದಿದೆ.

ಉದ್ಯಮಿ ಕಾರಿನಿಂದ ಇಳಿಯುತ್ತಿದ್ದಂತೆ ಎದುರಿಗೆ ಬಂದ ಇಬ್ಬರು ದರೋಡೆಕೋರರು ಗನ್‍ ಪಾಯಿಂಟ್‍ನಿಂದ ಬೆದರಿಸಿ, ಉದ್ಯಮಿ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದರೋಡೆಗೈದು ಪರಾರಿಯಾಗಿದ್ದರು. ಅದಾಗ್ಯೂ ಧೈರ್ಯಗೆಡದ ಉದ್ಯಮಿ, ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಕಾರಿನಲ್ಲಿ ಬೆನ್ನಟ್ಟಿದ್ದರು. ಜೊತೆಗೆ ಚೇಸ್ ಮಾಡುತ್ತಲೇ ಬೈಕ್ ಪ್ಯಾಟ್ರೋಲ್‍ನ ಪೊಲೀಸರಿಗೆ ದರೋಡೆ ನಡೆದ ಬಗ್ಗೆ ಹಾಗೂ ದರೋಡೆಕೋರರನ್ನು ಬೆನ್ನಟ್ಟಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ದೆಹಲಿಯ ಮೂಲ್‍ ಚಂದ್ ಆಸ್ಪತ್ರೆ ಬಳಿ ದರೋಡೆಕೋರರನ್ನು ಅಡ್ಡಗಟ್ಟುವಲ್ಲಿ ಉದ್ಯಮಿ ಯಶಸ್ವಿಯಾದರು. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಗಸ್ತು ಪೊಲೀಸರು ದರೋಡೆಕೋರರನ್ನು ಹಿಡಿದು ಬೆಲೆಬಾಳುವ ವಸ್ತುಗಳನ್ನು ಉದ್ಯಮಿಗೆ ಮರಳಿ ಸಿಗುವಂತೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...