alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ರೆಗೆ ಜಾರಿದ್ದ ಬಾಲಕಿಗೆ ಲೈಂಗಿಕ ಕಿರುಕುಳ

bus 16

ಧಾರವಾಡ: ಚಲಿಸುತ್ತಿದ್ದ ಬಸ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ, ಈ ಘಟನೆ ನಡೆದಿದ್ದು, ಬಸ್ ಟೈಯರ್ ಪಂಕ್ಚರ್ ಮಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 13ರಂದು ಬಾಲಕಿ, ಪೋಷಕರು ಹಾಗೂ ಸಹೋದರನೊಂದಿಗೆ ಬೆಂಗಳೂರಿನಿಂದ ಧಾರವಾಡಕ್ಕೆ ಹೊರಟಿದ್ದರು. ಸ್ಲೀಪರ್ ಕೋಚ್ ಆಗಿದ್ದ ಕಾರಣ, ಎಲ್ಲರೂ ತಮ್ಮ ನಿಗದಿತ ಆಸನದಲ್ಲಿ ನಿದ್ದೆಗೆ ಜಾರಿದ್ದಾರೆ. ಬಸ್ ವೇಗವಾಗಿ ಚಲಿಸುತ್ತಿತ್ತು. ಅಲ್ಲದೇ, ತಡರಾತ್ರಿಯಾಗಿದ್ದ ಕಾರಣ ಎಲ್ಲರೂ ನಿದ್ದೆಗೆ ಜಾರಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟ್ ನಲ್ಲಿದ್ದ ಬಸ್ ಚಾಲಕ ಮಲಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಿದ್ದೆಯಲ್ಲಿದ್ದ ಬಾಲಕಿ ಕೂಗಿಕೊಂಡಿದ್ದಾಳೆ.

ಆಗ ಡ್ರೈವರ್ ಕ್ಯಾಬಿನ್ ಕಡೆಗೆ ಓಡಿದ್ದಾನೆ. ಮಾರನೇ ದಿನ ರಾತ್ರಿ ಬಾಲಕಿಯ ಪೋಷಕರು ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ತಡೆದು, ಟೈಯರ್ ಪಂಕ್ಚರ್ ಮಾಡಿ, ಬಸ್ ಚಾಲಕನನ್ನು ಥಳಿಸಿದ್ದಾರೆ ಎನ್ನಲಾಗಿದೆ. ಧಾರವಾಡ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...