alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರಿಗೂ ಬೇಡವಾಯ್ತು ಹಳೆ ನೋಟು..!

old-note

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ನಂತರ ಎಲ್ರೂ ಫುಲ್ ಅಲರ್ಟ್ ಆಗಿದ್ದಾರೆ. ತಮ್ಮ ಹಣದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿದ್ದಾರೆ.

ಇನ್ಮೇಲೆ ನಿಮ್ಮ 500 ಹಾಗೂ 1000 ರೂ. ನೋಟುಗಳ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇಲ್ಲ, ಯಾಕಂದ್ರೆ ಕಳ್ಳರು ಕೂಡ ಹಳೆ ನೋಟುಗಳನ್ನು ಮುಟ್ಟುವುದಿಲ್ಲ. ಇದಕ್ಕೆ ಸಾಕ್ಷಿ ತೆಲಂಗಾಣದಲ್ಲಿ ನಡೆದ ಘಟನೆ.

ವಾರಂಗಲ್ ನಲ್ಲಿ ಕಳ್ಳನೊಬ್ಬ ವೈನ್ ಶಾಪ್ ಗೆ ಕನ್ನ ಹಾಕಿದ್ದ. ಕ್ಯಾಶ್ ಕೌಂಟರ್ ತೆರೆದು ನೋಡಿದ ಕಳ್ಳನಿಗೆ ಶಾಕ್, ಅದರಲ್ಲಿದ್ದಿದ್ದು ಬಹುತೇಕ ನಿಷೇಧಿತ ಹಳೆ ನೋಟುಗಳೇ. ಕೊನೆಗೆ ಹೊಸ ನೋಟುಗಳನ್ನು ಮಾತ್ರ ಆಯ್ದುಕೊಂಡ ಖದೀಮ 1 ಲಕ್ಷ ರೂಪಾಯಿಯಲ್ಲಿ ಕೇವಲ 35,000 ರೂಪಾಯಿ ತೆಗೆದುಕೊಂಡು ಉಳಿದಿದ್ದನ್ನೆಲ್ಲ ಅಲ್ಲೇ ಬಿಟ್ಟು ಹೋಗಿದ್ದಾನೆ.

ಈ ಸ್ಮಾರ್ಟ್ ಕಳ್ಳತನ ನಡೆದಿದ್ದು ಕಾಶಿಬುಗ್ಗಾದಲ್ಲಿರುವ ಕಿರಣ್ ವೈನ್ ಶಾಪ್ ನಲ್ಲಿ . ಮರುದಿನ ಬೆಳಗ್ಗೆ ಅಂಗಡಿ ತೆರೆಯಲು ಬಂದ ಮಾಲೀಕ ಕೃಷ್ಣಮೂರ್ತಿಗೆ ಆಘಾತದ ಜೊತೆಗೆ ಸಂತೋಷವೂ ಆಗಿತ್ತು. ಯಾಕಂದ್ರೆ ಹಳೆ ನೋಟುಗಳಿದ್ದಿದ್ರಿಂದ ಹೆಚ್ಚು ಹಣ ಕಳ್ಳನ ಪಾಲಾಗಿರಲಿಲ್ಲ. ಕೇವಲ ಕಳ್ಳರು ಮಾತ್ರವಲ್ಲ ಭಿಕ್ಷುಕರು ಕೂಡ ನಿಷೇಧಿತ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...