alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳಿಂದ ಪಾರಾಗಲು ಕಟ್ಟಡದಿಂದ ಹಾರಿದ ಯುವತಿ

suicide-by-jumping-off-from-building

ಹೆಣ್ಣುಮಕ್ಕಳ ಮೇಲೆ ಸ್ನೇಹಿತರು, ಪರಿಚಯಸ್ಥರಿಂದಲೇ ಹೆಚ್ಚಿನ ದೌರ್ಜನ್ಯ ನಡೆಯುತ್ತದೆ ಎಂಬುದು ಇತ್ತೀಚಿನ ಘಟನೆಗಳಿಂದ ಗೊತ್ತಾಗುತ್ತದೆ. ಹೀಗೆ ಸ್ನೇಹಿತರಿಂದಲೇ ದೌರ್ಜನ್ಯಕ್ಕೆ ಒಳಗಾಗುವ ಯತ್ನದಲ್ಲಿ ಯುವತಿಯೊಬ್ಬಳು ಕಟ್ಟಡದಿಂದ ಹಾರಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೋಲ್ಕತಾದ ಹೌರಾ ಎಂಬಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಯುವತಿಯೊಬ್ಬಳು ಸ್ನೇಹಿತರೊಂದಿಗೆ ರೂಂ ಗೆ ಹೋಗಿದ್ದು, ಅಲ್ಲಿ ಆಕೆಗೆ ಮತ್ತು ಬರುವ ಪಾನೀಯ ಕುಡಿಸಿ ಸ್ನೇಹಿತರೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದರಿಂದ ಪಾರಾಗಲು ಯುವತಿ 3 ಮಹಡಿ ಮೇಲಿನಿಂದ ಹಾರಿದ್ದಾಳೆ. ಯುವತಿ ಕಟ್ಟಡದ ಮೇಲಿನಿಂದ ಜಿಗಿದಿದ್ದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಭಾನುವಾರ ರಜೆ ಇದ್ದ ಕಾರಣ ಗೆಳೆಯರೊಂದಿಗೆ ಮಾತನಾಡಲು ಹೌರಾದಲ್ಲಿರುವ ರೂಂ ಗೆ ಯುವತಿ ಬಂದಿದ್ದಳು ಎನ್ನಲಾಗಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...