alex Certify
ಕನ್ನಡ ದುನಿಯಾ       Mobile App
       

Kannada Duniya

GST-ನೋಟು ನಿಷೇಧಕ್ಕೆ ಇನ್ನೊಂದು ಬಲಿ

ಜಿಎಸ್ಟಿ ಹಾಗೂ ನೋಟು ನಿಷೇಧದಿಂದಾಗಿ ನೀಡಿದ್ದ ಸಾಲವನ್ನು ವಾಪಸ್ ಪಡೆಯಲಾಗದೇ ಮಧ್ಯ ವಯಸ್ಸಿನ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಛತ್ತೀಸ್ಗಢದ ರಾಜ್ನಾಂದಗಾವ್ ನಲ್ಲಿ ಘಟನೆ ನಡೆದಿದೆ. ರೈಲಿಗೆ ತಲೆಯೊಡ್ಡಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದು ವಾಟ್ಸಾಪ್ ನಲ್ಲಿ ಆಡಿಯೋವೊಂದು ವೈರಲ್ ಆಗಿದೆ.

50 ವರ್ಷದ ಮಹವೀರ್ ಚೌದರಿಯಾ ವಾಟ್ಸಾಪ್ ಆಡಿಯೋ ರೆಕಾರ್ಡ್ ಮಾಡಿದ್ದು, ಡೆತ್ ನೋಟಿನ ಫೋಟೋವನ್ನು ಉದ್ಯಮಿಗಳು ಹಾಗೂ ವ್ಯಾಪಾರಿಗಳ ವಾಟ್ಸಾಪ್ ಗ್ರೂಪ್ ಗೆ ಕಳುಹಿಸಿದ್ದಾರೆ. ಮಹಾವೀರ್ ಉದ್ಯಮಿಯಾಗಿದ್ದು, ರಾಜ್ನಾಂದಗಾವ್ ನಲ್ಲಿ ವಿವಿಧ ಬ್ಯುಸಿನೆಸ್ ಗೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿದ್ದರು.

3.29 ನಿಮಿಷದ ಆಡಿಯೋ ಕ್ಲಿಪ್ ನಲ್ಲಿ ಮಹಾವೀರ್ ತನಗೆ ಯಾರು ಸಾಲ ವಾಪಸ್ ನೀಡಿಲ್ಲ ಎಂಬ ವಿವರ ಹೇಳಿದ್ದಾರೆ. ಹಣ ನೀಡದೆ ಕಿರುಕುಳ ನೀಡಿದ್ದು, ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಜಿಎಸ್ಟಿ ಕಾರಣದಿಂದಾಗಿ ನಾನು ನೀಡಿದ ಹಣವನ್ನು ವಾಪಸ್ ಪಡೆಯುವುದು ಕಷ್ಟವಾಗಿದೆ. ಇದ್ರಿಂದ ನನಗೆ ನಷ್ಟವಾಗಿದ್ದು, ಸಾಲ ಮರುಪಾವತಿ ಸಾಧ್ಯವಾಗ್ತಿಲ್ಲವೆಂದೂ ಮಹಾವೀರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...