alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ಕ್ಷಣದಲ್ಲಿ ಮದುವೆ ಮುರಿದುಕೊಂಡ ವಧು..ಕಾರಣ ಗೊತ್ತಾ?

ವರದಕ್ಷಿಣೆ ದುರಾಸೆ ವರ ಹಾಗೂ ಆತನ ಕುಟುಂಬಕ್ಕೆ ದುಬಾರಿಯಾಗಿ ಪರಿಣಮಿಸಿದೆ. ವಧುವಿಲ್ಲದೆ ಖಾಲಿ ಕೈನಲ್ಲಿ ದಿಬ್ಬಣ ವಾಪಸ್ ಆಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಶುರುವಾಗಿದೆ.

ಘಟನೆ ಮಧ್ಯಪ್ರದೇಶದ ನರಸಿಂಹಪುರದ ಮೊಹಮ್ಮದ್ ಗ್ರಾಮದಲ್ಲಿ ನಡೆದಿದೆ. ಜೂನ್ 18 ರಂದು ಮದುವೆ ನಿಶ್ಚಯವಾಗಿತ್ತು. ವರ ದಿಬ್ಬಣದ ಜೊತೆ ವಧು ಮನೆಗೆ ಬಂದಿದ್ದ. ವಧು ತಂದೆ ಕೈಲ್ಲಿದ್ದ ಹಣವನ್ನೆಲ್ಲ ಖರ್ಚು ಮಾಡಿ ಮಗಳ ಮದುವೆ ತಯಾರಿ ನಡೆಸಿದ್ದ. ಮದುವೆ ದಿನ ವಧುವಿಗೆ ಕರೆ ಮಾಡಿದ ವರ ಮೋಟರ್ ಸೈಕಲ್ ಕೇಳಿದ್ದಾನೆ. ವಧು ವಿಷ್ಯವನ್ನು ತಂದೆಗೆ ಹೇಳಿದ್ದಾಳೆ.

ಕೈನಲ್ಲಿದ್ದ ಹಣ ಖರ್ಚಾಗಿ ಸಾಲ ಮಾಡಿರುವ ತಂದೆ ಚಿಂತೆಗೆ ಬಿದ್ದಿದ್ದಾರೆ. ತಂದೆ ಚಿಂತೆ ಅರ್ಥ ಮಾಡಿಕೊಂಡ ಮಗಳು ಮದುವೆ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಸ್ವಲ್ಪ ಸಮಯ ಗಲಾಟೆ ನಡೆದಿದೆ. ಆದ್ರೆ ವಧು ನಿರ್ಧಾರ ಖುಷಿ ತಂದಿದೆ ಎಂದು ತಂದೆ ತಾಯಿ ಹೇಳಿದ್ದಾರೆ. ವರದಕ್ಷಿಣೆಗೆ ಆಸೆಪಡುವ ವ್ಯಕ್ತಿಗಳಿಗೆ ಹೀಗೆ ಬುದ್ದಿ ಕಲಿಸಬೇಕೆಂದು ವಧು ಹೇಳಿದ್ದಾಳೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...