alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಈ ಸಣ್ಣ ವಿಚಾರಕ್ಕೆ ಮಂಟಪ ಬಿಟ್ಟೋಡಿದ್ಲು ವಧು..!

dulha_10

ಬಣ್ಣ ನೋಡಿ ಮದುವೆಯಾಗ್ಬಾರದು ಮನಸ್ಸು ನೋಡಿ ಮನಸ್ಸು ಕೊಡಬೇಕೆಂದು ದೊಡ್ಡವರು ಹೇಳ್ತಾರೆ. ಆದ್ರೆ ಇದನ್ನು ಅನುಸರಿಸೋರು ಕೆಲವೇ ಕೆಲವು ಮಂದಿ ಮಾತ್ರ. ಈ ಮಾತನ್ನು ಈಗ ಹೇಳೋಕೆ ಕಾರಣ ಬಿಹಾರದಲ್ಲಿ ನಡೆದ ಒಂದು ಘಟನೆ. ಬಿಹಾರದ ವ್ಯಕ್ತಿಯೊಬ್ಬನಿಗೆ ಆತನ ಬಣ್ಣವೇ ದುಬಾರಿಯಾಗಿ ಪರಿಣಮಿಸಿದೆ.

ಮದುವೆ ಖುಷಿಯಲ್ಲಿ ವಧುವಿನ ಮನೆ ಬಾಗಿಲಿಗೆ ಬಂದ ವರ. ಹುಡುಗ ಹಾಗೂ ಆತನ ಮನೆಯವರಿಗೆ ವಧುವಿನ ಕಡೆಯವರು ಅದ್ಧೂರಿ ಸ್ವಾಗತ ನೀಡಿದ್ರು. ಆದ್ರೆ ಯಾರೂ ಮುಂದೆ ಹೀಗೊಂದು ಘಟನೆ ನಡೆಯುತ್ತೆ ಎಂದು ಭಾವಿಸಿರಲಿಲ್ಲ. ಮದುವೆ ಮಂಟಪಕ್ಕೆ ಬಂದ ವಧು ಸಪ್ತಪದಿ ತುಳಿಯುವ ವೇಳೆ ಮದುವೆ ಬೇಡ ಎಂದಿದ್ದಾಳೆ. ಇದಕ್ಕೆ ಕಾರಣವಾಗಿದ್ದು ವರನ ಬಣ್ಣ.

ವರ ಕಪ್ಪಾಗಿದ್ದಾನೆನ್ನುವ ಕಾರಣ ಹೇಳಿ ಮನೆಯಿಂದ ಓಡಿ ಹೋಗಿದ್ದಾಳೆ ವಧು. ಮದುವೆ ಮುರಿದ ದುಃಖವೊಂದೇ ಅಲ್ಲ ವರನ ಕಡೆಯವರನ್ನು ಕಟ್ಟಿ ಹಾಕಿ ಹಿಂಸೆ ನೀಡಿದ್ದಾರೆ ವಧುವಿನ ಕಡೆಯವರು. ಮಾರನೇ ದಿನ ನಡೆದ ಪಂಚಾಯತಿಯಲ್ಲಿ ಮದುವೆಗಾದ ಖರ್ಚನ್ನು ನೀಡುವಂತೆ ವರನ ಕಡೆಯವರಿಗೆ ಸೂಚನೆ ನೀಡಲಾಗಿದೆ. ಮದುವೆಯೂ ಇಲ್ಲದೆ ಹಣವೂ ಇಲ್ಲದೆ ಬರಿಗೈನಲ್ಲಿ ತೆರಳಿದ್ದಾರೆ ವರನ ಕಡೆಯವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...