alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ವಧು ಮಾಡಿದ್ದಾಳೆ ಈ ಕೆಲಸ

first-nt

ಮದುವೆಯ ಮೊದಲ ರಾತ್ರಿ ಬಗ್ಗೆ ಪ್ರತಿಯೊಬ್ಬರಿಗೂ ಸಾಕಷ್ಟು ಕನಸುಗಳಿರುತ್ತವೆ. ಆದ್ರೆ ಪ್ರಥಮ ಮಿಲನದ ಆ ರಾತ್ರಿ ಪಂಕಜ್ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ.

ಗಾಜಿಯಾಬಾದ್ ನ ಮೋದಿ ನಗರದಲ್ಲಿ ನಡೆದ ಘಟನೆ ಇದು. ರಾತ್ರಿ ಹಾಲು ಕುಡಿದು ಮಂಚ ಸೇರಿದ ವರನಿಗೆ, ವಧು ನಿದ್ದೆ ಮಾತ್ರೆ ತಿನ್ನಿಸಿಬಿಟ್ಟಿದ್ಲು. ತನ್ನ ಪತ್ನಿ ಡ್ರಗ್ಸ್ ಕೊಟ್ಟಿದ್ದಾಳೆ ಅನ್ನೋದರ ಅರಿವು ಕೂಡ ಅವನಿಗಿಲ್ಲ, ಗಡದ್ದು ನಿದ್ದೆ. ಗಂಡನಿಗೆ ನಿದ್ದೆ ಮಾತ್ರೆ ಹಾಕಿದ ವಧು 77,000 ರೂಪಾಯಿ ಹಣ ಹಾಗೂ 175 ಗ್ರಾಂ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಬೆಳಗ್ಗೆ ನವದಂಪತಿ ಎದ್ದು ಬರದೇ ಇದ್ದಿದ್ದನ್ನು ನೋಡಿ ಕೋಣೆಗೆ ಬಂದ ಸಂಬಂಧಿಕರಿಗೆ ಶಾಕ್ ಕಾದಿತ್ತು. ವರ ಪಂಕಜ್ ನಿದ್ದೆಯ ಅಮಲಿನಲ್ಲಿದ್ದ, ವಧು ಹಣ, ಆಭರಣದ ಜೊತೆ ಪರಾರಿಯಾಗಿದ್ಲು. ಕೇವಲ ಹಣಕ್ಕಾಗಿ ಆಕೆ ಓಡಿ ಹೋದ್ಲಾ ಅಥವಾ ಇನ್ನೇನಾದ್ರೂ ಕಾರಣವಿದೆಯಾ ಅನ್ನೋದು ಮಾತ್ರ ಗೊತ್ತಾಗಿಲ್ಲ. ವರನ ಕಡೆಯವರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಹೆಂಡ್ತಿ ಜೊತೆಗೆ ದುಡ್ಡೂ ಹೋಯ್ತಲ್ಲಾ ಅಂತ ಪಂಕಜ್ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...