alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಕದಿಯಲು ಗರ್ಭಿಣಿಯ ಹೊಟ್ಟೆ ಕತ್ತರಿಸಿದ ಕ್ರೂರ ದಂಪತಿ

belly-cut

ಬ್ರೆಜಿಲ್ ನಲ್ಲಿ ದಂಪತಿ 7 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಮಗುವನ್ನು ಕದಿಯಲು ಅವಳ ಹೊಟ್ಟೆಯನ್ನೇ ಕತ್ತರಿಸಿದ್ದಾರೆ.

ರಯನ್ನಿ ಕ್ರಿಸ್ಟಿನಿ ಕೋಸ್ಟಾ 7 ತಿಂಗಳ ಗರ್ಭಿಣಿಯಾಗಿದ್ಲು. ಥೈನಾ ಡಾ ಸಿಲ್ವಾ ಪಿಂಟೋ ಹಾಗೂ ಆಕೆಯ ಪತಿ ಫ್ಯಾಬಿಯೋ ಲ್ಯೂಜ್, ರಯಿನ್ನಿಯನ್ನು ಮನೆಗೆ ಆಹ್ವಾನಿಸಿದ್ರು. ಮಕ್ಕಳ ಬಟ್ಟೆಗಳನ್ನು ದಾನ ಮಾಡುವ ನೆಪದಲ್ಲಿ ಕರೆದಿದ್ರು. ಕೊನೆಗೆ ಮಗುವನ್ನು ಕದಿಯಲು ಅವಳ ಹೊಟ್ಟೆ ಕತ್ತರಿಸಿದ್ದಾರೆ.

ಆದ್ರೆ ಕೋಸ್ಟಾ ಎಂಟೂವರೆ ತಿಂಗಳ ಗರ್ಭಿಣಿ ಎಂದುಕೊಂಡಿದ್ದ ದಂಪತಿಗೆ ಆಕೆಗಿನ್ನೂ 7 ತಿಂಗಳು ಅನ್ನೋದು ಗೊತ್ತಾಗ್ತಿದ್ದಂತೆ ಮಗು ಹಾಗೂ ಗರ್ಭಿಣಿ ಇಬ್ಬರನ್ನೂ ಅರ್ಧಂಬರ್ಧ ಸುಟ್ಟು ಮನೆಯ ಗಾರ್ಡನ್ ನಲ್ಲಿ ಹಾಕಿದ್ದಾರೆ.

ಪಿಂಟೋ ಹಾಗೂ ಫ್ಯಾಬಿಯೋ 3 ವರ್ಷಗಳ ಹಿಂದೆ ಮದುವೆಯಾಗಿದ್ರು. ತಾನು ಗರ್ಭಿಣಿ ಅಂತಾ ಪಿಂಟೋ ಸ್ನೇಹಿತರು, ಸಂಬಂಧಿಕರ ಬಳಿಯೆಲ್ಲ ಹೇಳಿಕೊಂಡುಬಿಟ್ಟಿದ್ಲು. ಆದ್ರೆ ಅಂಡಾಶಯದಲ್ಲಿ ಸಿಸ್ಟ್ ಇರೋದ್ರಿಂದ ಸದ್ಯಕ್ಕೆ ಗರ್ಭಧರಿಸಲು ಸಾಧ್ಯವಿಲ್ಲ ಅಂತಾ ವೈದ್ಯರು ಹೇಳಿಬಿಟ್ಟಿದ್ರು. ವಾಟ್ಸಾಪ್ ಗ್ರೂಪ್ ಒಂದರ ಮೂಲಕ ಬಡ ಮಹಿಳೆ ಕೋಸ್ಟಾಳನ್ನು ಪರಿಚಯ ಮಾಡಿಕೊಂಡ ಪಿಂಟೋ ಅವಳ ಬದುಕನ್ನೇ ನಾಶ ಮಾಡಿದ್ದಾಳೆ. ಪಿಂಟೋ ಮತ್ತಾಕೆಯ ಪತಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...