alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರನ್ನು ಬೆನ್ನಟ್ಟಿ ಹಿಡಿದ ದೆಹಲಿಯ ದಿಟ್ಟ ಯುವತಿ

DELHI STUDENTದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬಳು ಬೆನ್ನಟ್ಟಿ ಹೋಗಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ್ದಾಳೆ.

ಆಗ ಬೆಳಗ್ಗೆ 7 ಗಂಟೆಯ ಸಮಯ. ಹೋಮ್ ಸೈನ್ಸ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿ, 18 ವರ್ಷದ ನಿಖಿತಾ ಸ್ಕೂಟಿ ಏರಿ ಕರ್ಕರ್ ದೂಮ ಮೆಟ್ರೋ ಸ್ಟೇಶನ್ ಕಡೆಗೆ ಹೊರಟಿದ್ಲು.

ಆನಂದ್ ವಿಹಾರ್ ಬಳಿ ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ಖದೀಮರು ನಿಖಿತಾಳ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಅವರು ತಳ್ಳಿದ ರಭಸಕ್ಕೆ ನಿಖಿತಾ ಸ್ಕೂಟಿಯಿಂದ ಕೆಳಕ್ಕೆ ಬಿದ್ದಿದ್ಲು. ಆದ್ರೆ ಧೈರ್ಯಗೆಡಲಿಲ್ಲ.

ಕೂಡಲೇ ತನ್ನ ಸ್ಕೂಟಿ ಏರಿ ಕಳ್ಳರನ್ನು ಬೆನ್ನಟ್ಟಿ ಹೋಗಿದ್ದಾಳೆ. ಇವಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯರ್ರಾಬಿರ್ರಿ ಬೈಕ್ ಓಡಿಸಿದ ಕಳ್ಳರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ನಿಖಿತಾ, ಅವರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಕಳ್ಳರನ್ನು ಹಿಡಿಯುವ ಭರದಲ್ಲಿ ನಿಖಿತಾ ಕಾಲಿಗೆ ಪೆಟ್ಟುಮಾಡಿಕೊಂಡಿದ್ದಾಳೆ. ಇಷ್ಟೆಲ್ಲಾ ಆದ್ಮೇಲೆ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರನ್ನು ಎಳೆದೊಯ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...