alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಕಮೆಂಟ್ ಮಾಡಿದ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಿದ್ಲು ವಿದ್ಯಾರ್ಥಿನಿ

ದೇಶದ ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಬೆರಳೆಣಿಕೆಯಷ್ಟು ಮಹಿಳೆಯರು ಇದ್ರ ವಿರುದ್ಧ ತಿರುಗಿ ಬೀಳ್ತಿದ್ದಾರೆ. ತಮಗಾಗ್ತಿರುವ ಅನ್ಯಾಯದ ವಿರುದ್ಧ ಹೋರಾಟ ಶುರು ಮಾಡಿದ್ದಾರೆ. ಇದಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ ಉತ್ತಮ ನಿದರ್ಶನ.

ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಕರೋಲ್ ಬಾಗ್ ಶಾಪಿಂಗ್ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಕಮೆಂಟ್ ಮಾಡಿದ್ದಾನೆ. ಎಲ್ಲರಂತೆ ಈಕೆಯೂ ಸುಮ್ಮನಿರ್ತಾಳೆಂದು ಭಾವಿಸಿದ್ದಾನೆ. ಆದ್ರೆ ಆತನ ಊಹೆ ತಪ್ಪಾಗಿದೆ. ವಿದ್ಯಾರ್ಥಿನಿ ತಿರುಗಿ ಬಿದ್ದಿದ್ದಾಳೆ. ಕಮೆಂಟ್ ಮಾಡಿದ ವ್ಯಕ್ತಿಗೆ ಥಳಿಸಿದ್ದಲ್ಲದೆ ಸಾರ್ವಜನಿಕ ಪ್ರದೇಶದಲ್ಲಿ ಕ್ಷಮೆ ಕೇಳುವಂತೆ ಮಾಡಿದ್ದಾಳೆ.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾರುಕಟ್ಟೆಗೆ ಹೋಗ್ತಿದ್ದ ವಿದ್ಯಾರ್ಥಿನಿ ಬಳಿ ರಿಕ್ಷಾವೊಂದು ಹಾದು ಹೋಗಿದೆ. ರಿಕ್ಷಾ ಮೇಲಿದ್ದ ಇಬ್ಬರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಇದ್ರಿಂದ ಕೋಪಗೊಂಡ ವಿದ್ಯಾರ್ಥಿನಿ ರಿಕ್ಷಾ ಹಿಂಬಾಲಿಸಿ ಒಬ್ಬನನ್ನು ಕೆಳಗಿಳಿಸಿ ಥಳಿಸಿದ್ದಾಳೆ. ಕಪಾಳ ಮೋಕ್ಷ ಮಾಡಿದ್ದಾಳೆ. ಆಕೆ ಒದೆ ತಿಂದ ವ್ಯಕ್ತಿ ಅಕ್ಕ, ಅಕ್ಕ ಎಂದಿದ್ದಲ್ಲದೆ ಕ್ಷಮೆ ಕೇಳಿದ್ದಾನೆ. ನಂತ್ರ ವಿದ್ಯಾರ್ಥಿನಿ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ಈ ಎಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿದ್ದರೂ ಸ್ಥಳದಲ್ಲಿ ನೆರೆದಿದ್ದವರು ವಿದ್ಯಾರ್ಥಿನಿ ನೆರವಿಗೆ ಬರಲಿಲ್ಲ. ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...