alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ ಪ್ರಿಯತಮೆ ಮನೆಗೆ ಬಂದ ಪ್ರೇಮಿಗೆ ಇಂದೆಂತಾ ಶಿಕ್ಷೆ..!

love_couple_1499071342_618x347

ಬಿಹಾರದ ಬೇಗುಸರಾಯ್ ಜಿಲ್ಲೆಯ ಬಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಿಯತಮೆಯನ್ನು ನೋಡಲು ಬಂದ ಪ್ರೇಮಿಗೆ ಆಕೆಯ ಕುಟುಂಬಸ್ಥರು ಘನಘೋರ ಶಿಕ್ಷೆ ನೀಡಿದ್ದಾರೆ. ಯುವಕನನ್ನು ಮನಸ್ಸಿಗೆ ಬಂದಂತೆ ಥಳಿಸಿ ಹತ್ಯೆಮಾಡಿದ್ದಾರೆ. ಕೊಲೆ ನಂತ್ರ ಶವವನ್ನು ಮನೆಯಲ್ಲಿಯೇ ಬಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಹುಡುಗನ ಸಂಬಂಧಿಕರಿಗೆ ವಿಷಯ ಗೊತ್ತಾಗಿದ್ದು ಅವರು ಗಲಾಟೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವಪರೀಕ್ಷೆ ನಡೆಸಿ ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ಮಾಹಿತಿ ಪ್ರಕಾರ ರಾಟನ್ ಗ್ರಾಮದ 25 ವರ್ಷದ ಧನೇಶ್ವರ್ ಎಂಬಾತ ಅದೇ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದ. ಶನಿವಾರ ರಾತ್ರಿ ಹುಡುಗಿಯನ್ನು ಭೇಟಿಯಾಗಲು ಆಕೆ ಮನೆಗೆ ಬಂದಿದ್ದಾನೆ. ಈ ವೇಳೆ ಹುಡುಗಿ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೋಪಗೊಂಡ ಹುಡುಗಿ ಕಡೆಯವರು ಮನಸ್ಸಿಗೆ ಬಂದಂತೆ ಥಳಿಸಿ ಧನೇಶ್ವರ್ ನನ್ನು ಹತ್ಯೆಗೈದಿದ್ದಾರೆ. ನಂತ್ರ ಶವವನ್ನು ಮನೆಯಲ್ಲಿಯೇ ಇಟ್ಟಿದ್ದಾರೆ.

ವಿಷಯ ಧನೇಶ್ವರ್ ಕುಟುಂಬಕ್ಕೆ ಗೊತ್ತಾಗ್ತಿದ್ದಂತೆ ಹುಡುಗಿ ಮನೆಗೆ ಬಂದು ಗಲಾಟೆ ಶುರುಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...