alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಒತ್ತಾಯಿಸಿದ ಹುಡುಗಿಯನ್ನು ಆಸ್ಟ್ರೇಲಿಯಾದಲ್ಲಿ ಬಿಟ್ಟು ಬಂದ…!

ನೋಯ್ಡಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೀತಿಸಿದ ಯುವತಿ ಮದುವೆಯಾಗುವಂತೆ ಪ್ರೇಮಿಗೆ ಒತ್ತಾಯ ಮಾಡಿದ್ದಾಳೆ. ಇದ್ರಿಂದ ಬೇಸತ್ತ ಯುವಕ ಸುತ್ತಾಡುವ ನೆಪದಲ್ಲಿ ಯುವತಿಯನ್ನು ಆಸ್ಟ್ರೇಲಿಯಾಗೆ ಕರೆದೊಯ್ದು ಅಲ್ಲಿಯೇ ಬಿಟ್ಟು ಬಂದಿದ್ದಾನೆ.

ನೋಯ್ಡಾದ ಸೆಕ್ಟರ್ 70ರಲ್ಲಿ ವಾಸವಾಗಿರುವ ಲಕ್ಷ್ಮಿಕಾಂತ್ ಮೊಬೈಲ್ ಬಿಡಿಭಾಗ ತಯಾರಿಸುವ ವ್ಯವಹಾರ ಮಾಡ್ತಿದ್ದ. ಯುವತಿಯೊಬ್ಬಳನ್ನು ಇದಕ್ಕೆ ಪಾರ್ಟನರ್ ಮಾಡಿಕೊಂಡಿದ್ದಾನೆ. ಮದುವೆ ಹೆಸರಲ್ಲಿ ಆಕೆ ಜೊತೆ ಶಾರೀರಿಕ ಸಂಬಂಧ ಕೂಡ ಬೆಳೆಸಿದ್ದಾನೆ.

ಕೆಲ ದಿನಗಳ ಹಿಂದೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಲಕ್ಷ್ಮಿಕಾಂತ್ ತನ್ನ ಮನೆ ಮಾರಾಟ ಮಾಡಿದ್ದಾನೆ. ಆದ್ರೆ ಯುವತಿ ಮಾತ್ರ ಆತನ ಬೆನ್ನು ಬಿಡಲಿಲ್ಲ. ಮದುವೆಯಾಗುವಂತೆ ಒತ್ತಾಯ ಮಾಡಿದ್ದಾಳೆ. ಹುಡುಗಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ದ ಲಕ್ಷ್ಮಿಕಾಂತ್ ಸುಮಾರು 20 ದಿನಗಳ ಕಾಲ ಆಕೆ ಜೊತೆ ಕಾಲ ಕಳೆದಿದ್ದಾನೆ. ನಂತ್ರ ಹೇಳದೆ ಭಾರತಕ್ಕೆ ವಾಪಸ್ ಆಗಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಏಕಾಂಗಿಯಾದ ಹುಡುಗಿ ಹಣವಿಲ್ಲದೆ ಕಂಗಾಲಾಗಿದ್ದಾಳೆ. ಸಾಮಾಜಿಕ ಜಾಲತಾಣದ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ಹಣ ರವಾನೆ ಮಾಡಿದ ನಂತ್ರ ಭಾರತಕ್ಕೆ ಬಂದ ಯುವತಿ ಯುವಕನ ವಿರುದ್ಧ ದೂರು ನೀಡಿದ್ದಾಳೆ. ಸದ್ಯ ಲಕ್ಷ್ಮಿಕಾಂತ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...