alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷ ಕುಡಿಯುವ ಮುನ್ನ ಯುವಕ ಮಾಡಿದ್ದೇನು?

selfie

ಹೈದ್ರಾಬಾದ್ ನ ಮಲ್ಲೆಪಲ್ಲಿ ಎಂಬಲ್ಲಿ ಯುವಕನೊಬ್ಬ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 20 ವರ್ಷದ ಪದವಿ ವಿದ್ಯಾರ್ಥಿ ಸಾಹಿರ್ ಮದಾನಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಯುವತಿಯೊಬ್ಬಳನ್ನು ಪ್ರೀತಿಸ್ತಾ ಇದ್ದ.

ಆಕೆಗಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ, ಆದ್ರೆ ಪ್ರಯೋಜನವಾಗಿಲ್ಲ ಅಂತಾ ಮೊದಲು ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾನೆ. ಇನ್ನು ನನಗೆ ಬದುಕಲು ಇಷ್ಟವಿಲ್ಲ ಎಂದಿದ್ದ ಸಾಹಿರ್, ವಿಷ ಸೇವಿಸಿದ್ದ. ಹಬೀಬ್ ನಗರದಲ್ಲಿರುವ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆ ಸಮಯದಲ್ಲಿ ಸಾಹಿರ್ ಹೆತ್ತವರು ಯಾವುದೋ ಫಂಕ್ಷನ್ ಗೆ ತೆರಳಿದ್ರು. ಮನೆಗೆ ಬರುವಷ್ಟರಲ್ಲಿ ಮಗ ಅಸ್ವಸ್ಥನಾಗಿ ಬಿದ್ದಿದ್ದನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಸಾಹಿರ್, ಚೇತರಿಸಿಕೊಳ್ಳುತ್ತಿದ್ದಾನೆ.

ಆತನ ಮೊಬೈಲ್ ನಲ್ಲಿ ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ್ದ ವಿಡಿಯೋ ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೆ ಸಾಹಿರ್, ಪ್ರೇಯಸಿ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...