alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆ ತುಳಿದ ಬಾಲಕನನ್ನು ಹತ್ಯೆ ಮಾಡಿದ ಸಹೋದರರು

crime-sceneಮನೆಯ ಮುಂದೆ ಹಾಸಿದ್ದ ಹಾಸಿಗೆ ತುಳಿದನೆಂಬ ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ.

16 ವರ್ಷದ ಮಾಬೂಲಿ ರಾಜಾಸಾಬ್ ಜಾತಿಗೇರ ಎಂಬಾತ ತಮ್ಮ ಮನೆ ಮುಂದೆ ಹಾಸಲಾಗಿದ್ದ ಹಾಸಿಗೆಯನ್ನು ತುಳಿದನೆಂಬ ಕಾರಣಕ್ಕೆ ಸಹೋದರರಾದ ದುರ್ಗಪ್ಪ, ಲಕ್ಷ್ಮಣ, ರಂಗಪ್ಪ ಹಾಗೂ ಸಾಬಣ್ಣ ತೀವ್ರವಾಗಿ ಥಳಿಸಿದ್ದಾರೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ರೋಣ ಪಟ್ಟಣ ಪೊಲೀಸರು ಆರೋಪಿ ಸಹೋದರರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...