alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಹುಡುಗಿ ಫೋಟೋ, ನಂಬರ್ ಹಾಕಿ Call me ಎಂದ..!

ವಾರಣಾಸಿಯಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಹುಡುಗಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಓಪನ್ ಮಾಡಿದ್ದ ಈ ಯುವಕ ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಪೋಸ್ಟ್ ಮಾಡ್ತಿದ್ದ. ಇಷ್ಟೇ ಅಲ್ಲ ಫೋನ್ ನಂಬರ್ ಕೂಡ ಹಾಕಿದ್ದ.

ಹುಡುಗಿ ನಂಬರ್ ಗೆ ಅನೇಕ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಬರಲು ಶುರುವಾಗಿದ್ದವು. ಪಾಂಡಿಯೂರಿನಲ್ಲಿ ಅಂಗಡಿ ನಡೆಸುತ್ತಿರುವ ರಾಕೇಶ್ ಎಂಬಾತ ಹುಡುಗಿ ಫೇಸ್ಬುಕ್ ನಿಂದ ಫೋಟೋ ಹಾಗೂ ನಂಬರ್ ಕದ್ದಿದ್ದಾನೆ. ನಂತ್ರ ಫೋಟೋಶಾಪ್ ಸಹಾಯದಿಂದ ಫೋಟೋ ಎಡಿಟ್ ಮಾಡಿ ಫೇಸ್ಬುಕ್ ಹಾಗೂ ವೈಯಕ್ತಿಕ ಚಾಟ್ ನಲ್ಲಿ ಫೋಟೋಗಳನ್ನು ಹಾಕಿದ್ದಾನೆ. ಫೋನ್ ನಂಬರ್ ಹಾಕಿದ್ದರಿಂದ ಹುಡುಗಿಗೆ ಫೋನ್ ಹಾಗೂ ಮೆಸ್ಸೇಜ್ ಬರಲು ಶುರುವಾಗಿದೆ. ಇದ್ರಿಂದ ಕಂಗಾಲಾದ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದ್ರೆ ಆರೋಪಿ ಇದ್ರಲ್ಲಿ ನನ್ನ ತಪ್ಪಿಲ್ಲ. ಹುಡುಗಿ ಹಾಗೂ ಆಕೆ ಕುಟುಂಬದವರ ಕುತಂತ್ರವಿದು ಎಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...