alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರನ್ನು ದಂಗಾಗಿಸ್ತು ಪತಿ ಮುಖಕ್ಕೆ ಬಿಸಿ ಹಾಲು ಹಾಕಿದ ಪತ್ನಿ ಅಸಲಿಯತ್ತು

ಮಹಿಳೆಯೊಬ್ಬಳು ತನ್ನ ಪತಿ ಮುಖಕ್ಕೆ ಬಿಸಿಬಿಸಿ ಹಾಲು ಹಾಕಿದ್ದಾಳೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದ ಪೊಲೀಸರೇ ದಂಗಾಗಿದ್ದಾರೆ. ಘಟನೆ ಜಾರ್ಖಂಡ್ ನ ಗುರುಗ್ರಾಮ್ ನಲ್ಲಿ ನಡೆದಿದೆ.

ಪಾಲಂ ವಿಹಾರ್ ಫೇಸ್-2ರ ನಿವಾಸಿ ಜೋಗೇಂದ್ರ, ಪತ್ನಿ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಕೋಪಗೊಂಡ ಪತ್ನಿ ಮಲಗಿದ್ದ ಪತಿ ಮುಖಕ್ಕೆ ಬಿಸಿಬಿಸಿ ಹಾಲು ಹಾಕಿದ್ದಾಳೆ. ಜೋಗೇಂದ್ರ ಪರಿಸ್ಥಿತಿ ಗಂಭೀರವಾಗಿದೆ. ಜೋಗೇಂದ್ರ 2002ರಲ್ಲಿ ವಿವಾಹವಾಗಿದ್ದ. 2004ರಲ್ಲಿಯೇ ಪತ್ನಿ ಅಕ್ರಮ ಸಂಬಂಧದ ಬಗ್ಗೆ ತಿಳಿದಿತ್ತು. ಆಗಿನಿಂದಲೂ ಜೋಗೇಂದ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಅನೇಕ ಬಾರಿ ಗಲಾಟೆ ನಡೆದಿದೆ.

ಶನಿವಾರ ರಾತ್ರಿ ಪತಿ ಮಲಗಿದ್ದಾಗ ಬಿಸಿ ಹಾಲನ್ನು ಮುಖಕ್ಕೆ ಹಾಕಿದ್ದಾಳೆ ಪತ್ನಿ. ಜೋಗೇಂದ್ರ ಕೂಗು ಕೇಳಿ ಓಡಿ ಬಂದ ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಜೋಗೇಂದ್ರ ದೂರು ನೀಡಿದ್ದಾನೆ. ಆದ್ರೆ ಈವರೆಗೂ ಪೊಲೀಸರು ಮಹಿಳೆಯನ್ನು ಬಂಧಿಸಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...