alex Certify
ಕನ್ನಡ ದುನಿಯಾ       Mobile App
       

Kannada Duniya

ಚರಂಡಿಯಲ್ಲಿ ಪತ್ತೆಯಾಯ್ತು ಬಾಲಕಿಯ ಕೊಳೆತ ಶವ

ಹರಿಯಾಣದ ರೋಹ್ಟಕ್ ನಲ್ಲಿ ಚರಂಡಿಯೊಳಗೆ 9 ವರ್ಷದ ಬಾಲಕಿಯ ಕೊಳೆತ ಶವ ಸಿಕ್ಕಿದೆ. ಆದ್ರೆ ಬಾಲಕಿಯ ಕೈಗಳು ನಾಪತ್ತೆಯಾಗಿವೆ. ಹಸಿರು ಬಣ್ಣದ ಬ್ಯಾಗ್ ಒಂದರಲ್ಲಿ ಬಾಲಕಿಯನ್ನು ತುಂಬಿಸಿ ಚರಂಡಿಗೆ ಎಸೆಯಲಾಗಿತ್ತು.

5 ದಿನಗಳ ಹಿಂದೆಯೇ ಆಕೆ ಮೃತಪಟ್ಟಿರಬಹುದು ಅಂತಾ ಪೊಲೀಸರು ಶಂಕಿಸಿದ್ದಾರೆ. ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಅದರ ಮಧ್ಯೆಯೇ ಮತ್ತೊಂದು ಕ್ರೂರ ಕೃತ್ಯ ಬೆಳಕಿಗೆ ಬಂದಿದೆ. ತಿಥೋಲಿ ಗ್ರಾಮದ ಬಳಿ ಚರಂಡಿಯೊಂದರಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿರೋದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಬ್ಯಾಗ್ ತೆರೆದ ಪೊಲೀಸರು ಬಾಲಕಿಯ ಶವ ನೋಡಿ ಆಘಾತಗೊಂಡಿದ್ದಾರೆ.

ಬಾಲಕಿಯ ಕೈಗಳನ್ನು ಯಾವುದಾದರೂ ಜಲಚರ ತಿಂದು ಹಾಕಿರಬಹುದು ಅಂತಾನೂ ಹೇಳಲಾಗುತ್ತಿದೆ. 2 ದಿನಗಳ ಹಿಂದಷ್ಟೆ ಗುಜರಾತ್ ನಲ್ಲಿ ಬಾಲಕಿಯೊಬ್ಬಳ ಶವ ಸಿಕ್ಕಿತ್ತು. ಅವಳ ಮೈಮೇಲೆ 86ಕ್ಕೂ ಹೆಚ್ಚು ಗಾಯದ ಗುರುತುಗಳಿದ್ದವು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...