alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲೂ ವೇಲ್ ಚಟಕ್ಕೆ ಬಿದ್ದು 2 ಬಾರಿ ಆತ್ಮಹತ್ಯೆಗೆ ಯತ್ನ

ಅಪಾಯಕಾರಿ  ಬ್ಲೂ ವೇಲ್ ಗೇಮ್ ಹುಚ್ಚಿಗೆ ಬಿದ್ದಿದ್ದ 17 ವರ್ಷದ ಹುಡುಗಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸರೋವರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಜೋಧ್ಪುರ ಮೂಲದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಸೋಮವಾರ ಸ್ನೇಹಿತೆಯರನ್ನು ಭೇಟಿಯಾಗುವುದಾಗಿ ಹೆತ್ತವರ ಬಳಿ ಹೇಳಿ ಹೋಗಿದ್ಲು. ಕೈಮೇಲೆ ಬ್ಲೂವೇಲ್ ಚಿತ್ರ ಬಿಡಿಸಿಕೊಂಡು ಮೊಬೈಲ್ ಅನ್ನು ಅಲ್ಲೇ ಬಿಸಾಡಿ ಕೈಲನ ಸರೋವರಕ್ಕೆ ಹಾರಿದ್ದಾಳೆ. ಈ ವೇಳೆ ಅವಳನ್ನು ರಕ್ಷಣೆ ಮಾಡಲಾಗಿತ್ತು.

ಮರುದಿನ ಅಂದ್ರೆ ಮಂಗಳವಾರ ಕೂಡ ಬಾಲಕಿ ಮನೆಯಲ್ಲಿದ್ದ ಮಾತ್ರೆಗಳನ್ನು ತಿಂದು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಆಕೆಯನ್ನು ಐಸಿಯುನಲ್ಲಿ ದಾಖಲು ಮಾಡಲಾಗಿದೆ. ಸದ್ಯ ವಿದ್ಯಾರ್ಥಿನಿ ಅಪಾಯದಿಂದ ಪಾರಾಗಿದ್ದಾಳೆ ಅಂತಾ ವೈದ್ಯರು ತಿಳಿಸಿದ್ದಾರೆ. ಆಕೆಗೆ ಕೌನ್ಸಿಲಿಂಗ್ ಕೂಡ ಏರ್ಪಡಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...