alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಬಿಜೆಪಿ ನಾಯಕನ ಪುತ್ರ

ಮಧ್ಯಪ್ರದೇಶದ ಬಿಜೆಪಿ ನಾಯಕ ಗಂಭೀರಮಲ್ ರಾಠೆ ಮಗ ಸಂದೀಪ್ ರಾಠೆ ಕರ್ಮಕಾಂಡ ಬಯಲಾಗಿದೆ. ಸಂದೀಪ್ ರಾಠೆ 17 ವರ್ಷದ ಹುಡುಗಿಯನ್ನು ಹೊಟೇಲ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅದ್ರ ವಿಡಿಯೋ ಕೂಡ ಮಾಡಿದ್ದಾನೆ. ವಿಡಿಯೋ ಎರಡು ದಿನಗಳ ಹಿಂದೆ ವೈರಲ್ ಆಗಿದೆ. ಪೊಲೀಸ್ ಠಾಣೆಗೆ ಬಂದು ಮೊಬೈಲ್ ರಿಪೇರಿಗೆ ನೀಡಿದ್ದೆ. ಯಾರು ವೈರಲ್ ಮಾಡಿದ್ದಾರೆಂಬುದು ತಿಳಿದಿಲ್ಲವೆಂದು ಸಂದೀಪ್ ಹೇಳಿದ್ದಾನೆ.

ಹುಡುಗಿ ಮನೆಯೊಂದರಲ್ಲಿ ಕೆಲಸ ಮಾಡ್ತಿದ್ದಳು. ಶಿವಾಜಿ ಚೌಕದಲ್ಲಿ ಈಕೆಯನ್ನು ನೋಡಿದ್ದ ಸಂದೀಪ್ ನಿನ್ನನ್ನು ಪ್ರೀತಿ ಮಾಡುತ್ತಿದ್ದೇನೆಂದು ನಂಬಿಸಿದ್ದಾನೆ. ಮೇ.16ರಂದು ಸುತ್ತಾಡಿಸಿಕೊಂಡು ಬರುತ್ತೇನೆ ಬಾ ಎಂದು ಕಾರಿನಲ್ಲಿ ಪೀಡಿತೆಯನ್ನು ಕರೆದೊಯ್ದಿದ್ದಾನೆ. ನಂತ್ರ ಹೊಟೇಲ್ ನಲ್ಲಿ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ದಾನೆ. ಹುಡುಗಿಯನ್ನು ರಸ್ತೆ ಪಕ್ಕದಲ್ಲಿ ಬಿಟ್ಟು ಮನೆಗೆ ಹೋಗಿದ್ದಾನೆ.

ಎರಡು ದಿನಗಳ ಹಿಂದೆ ಸಂದೀಪ್ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನಂತ್ರ ಹುಡುಗಿ ಸಂಬಂಧಿಕರು ದೂರು ನೀಡಲು ಮುಂದಾಗಿದ್ದಾರೆ. ಆರಂಭದಲ್ಲಿ ಇದನ್ನು ತಡೆಯಲು ಯತ್ನಿಸಿದ ಸಂದೀಪ್ ನಂತ್ರ ಪೊಲೀಸ್ ಠಾಣೆಗೆ ತಾನೂ ಹೋಗಿದ್ದಾನೆ. ಮೊಬೈಲ್ ರಿಪೇರಿಗೆ ನೀಡಿದ್ದೆ. ಅಲ್ಲಿ ವಿಡಿಯೋ ವೈರಲ್ ಆಗಿದೆ ಎಂದಿದ್ದಾನೆ. ಪೀಡಿತೆ ಮನೆಯವರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂದೀಪ್ ನನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...