alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮಾಂಧರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ್ಲು ಮಹಿಳೆ

ದೆಹಲಿಯ ನಿರ್ಭಯಾ ಪ್ರಕರಣದಂತಹ ಮತ್ತೊಂದು ಪೈಶಾಚಿಕ ಕೃತ್ಯ ಬಿಹಾರದಲ್ಲಿ ನಡೆದಿದೆ. ಅತ್ಯಾಚಾರ ವಿರೋಧಿಸಿದ 35 ವರ್ಷದ ಮಹಿಳೆಯನ್ನು ಇಬ್ಬರು ಕಾಮುಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಮಾಡಲು ಸಾಧ್ಯವಾಗಿಲ್ಲ ಅನ್ನೋ ಕೋಪದಲ್ಲಿ ಒಬ್ಬ ಯುವಕ ಅವಳ ಗುಪ್ತಾಂಗದೊಳಕ್ಕೆ ಕಬ್ಬಿಣದ ರಾಡ್ ಹಾಕಿ ಕೊಂದಿದ್ದಾನೆ.

ಪಾಟ್ನಾದ ನೌಬತ್ಪುರ್ ಎಂಬಲ್ಲಿ ಈ ಹೇಯ ಕೃತ್ಯ ನಡೆದಿದೆ. 22 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆ ನಾಲ್ವರು ಮಕ್ಕಳ ತಾಯಿ. ಆರೋಪಿಗೆ ಮೊದಲಿನಿಂದ್ಲೂ ಅವಳ ಪರಿಚಯವಿತ್ತು. ಸ್ನೇಹಿತನ ಜೊತೆಗೆ ಸೇರಿ ಅವಳ ಮೇಲೆ ಅತ್ಯಾಚಾರಕ್ಕೆ ಆತ ಮುಂದಾಗಿದ್ದ.

2012ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಥದ್ದೇ ನೀಚ ಕೃತ್ಯ ನಡೆದಿತ್ತು. ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಬಸ್ ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮಾಂಧರು, ಅವಳನ್ನು ಬರ್ಬರವಾಗಿ ಹಿಂಸಿಸಿದ್ದರು. ಕಾಮುಕರ ಕ್ರೌರ್ಯಕ್ಕೆ ನಲುಗಿದ ನಿರ್ಭಯಾ ಮೃತಪಟ್ಟಿದ್ದಳು.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...