alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ಪಾಯಿಂಟ್ ನಲ್ಲಿ ಬಲವಂತದ ಮದುವೆ…!

ಪಾಟ್ನಾ: ಯುವಕನನ್ನು ಅಪಹರಿಸಿದ ಯುವತಿ ಕುಟುಂಬದವರು ಬೆದರಿಸಿ, ಗನ್ ಪಾಯಿಂಟ್ ನಲ್ಲಿ ಮದುವೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬೊಕಾರೋ ಸ್ಟೀಲ್ ಪ್ಲಾಂಟ್ ನಲ್ಲಿ ಇಂಜಿನಿಯರ್ ಆಗಿರುವ 29 ವರ್ಷದ ವಿನೋದ್ ಕುಮಾರ್ ಅವರನ್ನು ಪಾಂಡಾರಕ್ ಪ್ರದೇಶದಲ್ಲಿ ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿದೆ.

ತಮ್ಮನ್ನು ಬಿಡುವಂತೆ ವಿನೋದ್ ಬೇಡಿಕೊಂಡರೂ ಕೇಳದ ವಧುವಿನ ಬಂಧುಗಳು, ನಿನಗೇನು ನೇಣು ಹಾಕ್ತಿಲ್ಲ, ತಾಳಿ ಕಟ್ಟು ಎಂದು ಬೆದರಿಸಿದ್ದಾರೆ. ಗನ್ ಪಾಯಿಂಟ್ ನಲ್ಲಿ ಮದುವೆ ಮಾಡಿದ್ದಾರೆ.

ಈ ಮದುವೆಯನ್ನು ಅಂಗೀಕರಿಸಬಾರದೆಂದು ವಿನೋದ್ ಮತ್ತು ಅವರ ಸಹೋದರ ಸಂಜಯ್ ಕುಮಾರ್, ಪೊಲೀಸರ ಮೊರೆ ಹೋಗಿದ್ದು, ಅವರಿಗೆ ಬೆದರಿಕೆ ಕರೆಗಳು ಬರತೊಡಗಿವೆ.

ಡಿಸೆಂಬರ್ ನಲ್ಲಿ ಘಟನೆ ನಡೆದಿದೆ. ಪಾಟ್ನಾ ಸಮೀಪದಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿನೋದ್ ಹೊರಟಿದ್ದ ಸಂದರ್ಭದಲ್ಲಿ ವಧುವಿನ ಸಹೋದರ ಸುರೇಂದ್ರ ಯಾದವ್ ಅಪಹರಿಸಿ, ಬಲವಂತವಾಗಿ ಮದುವೆ ಮಾಡಿದ್ದಾನೆ ಎಂದು ದೂರಲಾಗಿದೆ. ಪಾಟ್ನಾ ಎಸ್.ಪಿ. ಭೇಟಿ ಮಾಡಿ ಸಂಜಯ್ ಕುಮಾರ್ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...