alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಂಗ್ ರೇಪ್ ಪ್ರಕರಣದ ವರದಿಯಲ್ಲಿ ವೈದ್ಯರ ಯಡವಟ್ಟು

ಕೋಚಿಂಗ್ ಕ್ಲಾಸ್ ನಿಂದ ಮರಳಿ ಮನೆಗೆ ಹೋಗುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಮೇಲೆ ನಾಲ್ಕು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದ ಘಟನೆ ಅಕ್ಟೋಬರ್ 31 ರಂದು ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ನಡೆದಿತ್ತು.

ವಿದ್ಯಾರ್ಥಿನಿ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ವೇಳೆ ಇದೊಂದು ಕಟ್ಟುಕಥೆ ಎಂದು ತಳ್ಳಿ ಹಾಕಿದ್ದ ಪೊಲೀಸ್ ಅಧಿಕಾರಿಯೊಬ್ಬ ಈಗ ಕೆಲಸದಿಂದ ಸಸ್ಪೆಂಡ್ ಆಗಿದ್ದಾನೆ.

ಮಾಧ್ಯಮಗಳಲ್ಲಿ ಗ್ಯಾಂಗ್ ರೇಪ್ ಕುರಿತ ವರದಿ ಬಂದ ಬಳಿಕ ಎಚ್ಚೆತ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ವೇಳೆ ಅತ್ಯಾಚಾರ ನಡೆದಿರುವುದು ಸಾಬೀತಾಗಿತ್ತು. ಆದರೆ ವರದಿ ನೀಡುವ ವೈದ್ಯರು ಮಾಡಿರುವ ಯಡವಟ್ಟು ಈಗ ಚರ್ಚೆಗೆ ಕಾರಣವಾಗಿದೆ.

ಭೂಪಾಲ್ ನ ಸುಲ್ತಾನಿಯಾ ಲೇಡಿ ಹಾಸ್ಪೆಟಲ್ ನಲ್ಲಿ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆದಿದ್ದು, ಆಕೆಯ ಸಮ್ಮತಿಯ ಮೇರೆಗೆ ಸಂಭೋಗ ನಡೆದಿದೆ ಎಂದು ವೈದ್ಯರು ವರದಿ ನೀಡಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ ಒಂದು ಕಾಲಂನಲ್ಲಿ ಸಂತ್ರಸ್ಥ ವಿದ್ಯಾರ್ಥಿನಿಯನ್ನೇ ಆರೋಪಿ ಎಂದಿದ್ದಾರೆ. ಇದು ಗಮನಕ್ಕೆ ಬರುತ್ತಲೇ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಇಬ್ಬರು ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ವಿಚಾರಣೆ ವೇಳೆ, ಕಣ್ತಪ್ಪಿನಿಂದ ಈ ಪ್ರಮಾದವಾಗಿದೆ ಎಂದು ವೈದ್ಯರು ತಿಳಿಸಿದ್ದು, ಆದರೆ ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ವೈದ್ಯರು ಕೂಲಂಕುಷವಾಗಿ ಗಮನಿಸದೆ ಬೇಜವಾಬ್ದಾರಿಯುತವಾಗಿ ವರದಿ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...